ಫೆಬ್ರವರಿ 15, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಸುಧಾಕರ್ ಅವರು ಮಾತನಾಡಿದರು. 

 ಸರ್ಕಾರಿ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈ ಕೂಡಲೇ ಈಡೇರಿಸಬೇಕೆಂದು ಸುಧಾಕರ್ ಅವರು ಒತ್ತಾಯಿಸಿದರು.

ಹೊರಗುತ್ತಿಗೆ ನೌಕರರ ಹಿತ ಕಾಯಲು ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಂಘ, ರಚನೆ ಮಾಡಿರುವುದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ ಸ್ವಾಗತಿಸುತ್ತಾ ಸರ್ಕಾರವನ್ನು ಅಭಿನಂದಿಸುತ್ತಿದ್ದೇವೆ. ಮುಂದುವರೆದ ಭಾಗವಾಗಿ ಸರ್ಕಾರದ ನಡಾವಳಿ ಪ್ರಕಾರ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಸೊಸೈಟಿ ಬೈಲಾದಲ್ಲಿ ನಮೂದು ಆಗಿರುವುದಿಲ್ಲ ಮತ್ತು ಹೊರಗುತ್ತಿಗೆ ನೌಕರರ ಹಿತವನ್ನು ಕಾಯಲು ಸೊಸೈಟಿಯಲ್ಲಿ ಯಾವುದೇ ರೀತಿಯ ಪಾರದರ್ಶಕದ ಆದೇಶಗಳನ್ನು ಸರ್ಕಾರ ನೀಡಿರುವುದಿಲ್ಲ. ಆದ್ದರಿಂದ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಈ ಕೆಳಕಂಡ ಬೇಡಿಕೆಗಳನ್ನು ಪತ್ರಿಕಾ ಘೋಷ್ಠಿಯ ಮೂಲಕ ಮನವಿಯನ್ನು ಮಾಡುತ್ತಿದ್ದೇವೆ. ಕಾಲಮಿತಿ ಒಳಗೆ ನಮ್ಮ ಬೇಡಿಕೆಗಳನ್ನು ಪೂರೈಸದೆ ಇದ್ದರೆ ಕಾನೂನು ಹೋರಾಟವನ್ನು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮಾಡುತ್ತೇವೆಂದು ಈ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ.

ಬೇಡಿಕೆಗಳು:-

1. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅದೇ ಹುದ್ದೆ ಹಾಗೂ ಅದೇ ಇಲಾಖೆಯ ಕಚೇರಿಯಲ್ಲಿ ಮುಂದುವರೆಸುವ ಕುರಿತು ಕ್ರಮ ಕೈಗೊಳ್ಳುವುದು.

2. ನಿಯೋಜನೆ ಅವಧಿಯನ್ನು 6 ತಿಂಗಳ ಬದಲಾಗಿ ಕನಿಷ್ಠ ವರ್ಷ ನಿಗಧಿಪಡಿಸುವುದು.

3. ಎಲ್ಲಾ ನೌಕರರಿಗೆ ಕಡ್ಡಾಯವಾಗಿ ಸೇವಾ ಭದ್ರತೆ ಒದಗಿಸುವುದು.

4. ಸರ್ಕಾರದ ಅನುದಾನದ ನೆಪ ಹೇಳದ ಕಡ್ಡಾಯವಾಗಿ ಪ್ರತಿ ತಿಂಗಳ ವೇತನ ಮತ್ತು ಇಪಿಎಫ್ ಹಾಗೂ ಇಎಸ್‌ಐ ಪಾವತಿಸುವುದು.

5. ಕಾರ್ಮಿಕ ಇಲಾಖೆ ಸುತ್ತೋಲೆಯಂತೆ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡುವುದು.

16. ಮಹಿಳಾ ನೌಕರರಿಗೆ ವಿಶೇಷ ರಜೆ ಸೌಲಭ್ಯ ನೀಡುವುದು.