ಫೆಬ್ರವರಿ 15, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ರಾಜ್ಯ ಒಕ್ಕಲಿಗ ಸಮುದಾಯದ ಮೀಸಲಾತಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ (ಪ್ರಾ)' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಕೆ. ವಿ. ಮೂಡ್ಲಿಗಿರಯ್ಯ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಒಕ್ಕಲಿಗ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಸಬಾ ಹೋಬಳಿ, ಎಸ್.ಕೊಡಗೀಹಳ್ಳಿ ಗ್ರಾಮದ ನಿವಾಸಿಯಾದ ಕೆ.ವಿ. ಮೂಡ್ಲಿಗಿರಯ್ಯ ಆದ ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನಾಗಿದ್ದು, ಡಿಪ್ಲೊಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಬಿ.ಎ. ಪದವೀಧರನಾಗಿದ್ದು, (ಎಲ್.ಎಲ್.ಬಿ. ಮತ್ತು ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿ) ಮಾನ್ಯ ವಿಧಾನಪರಿಷತ್ ಸದಸ್ಯರಾಗಿದ್ದ ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ ಮತ್ತು ಶ್ರೀ ಬಸವರಾಜ ಹೊರಟ್ಟಿ ರವರ ಆಪ್ತಸಹಾಯಕನಾಗಿ ಸೇವೆ ಸಲ್ಲಿಸಿದ್ದೇನೆ. 2008-2009 ನೇ ಸಾಲಿನಲ್ಲಿ ನನಗೆ ಕೆ.ಎಸ್.ಆರ್.ಟಿ.ಸಿ ನಿಗಮದಲ್ಲಿ ಚಾರ್ಜ್‌ಮೆನ್ ಹುದ್ದೆಯು ಮೀಸಲಾತಿ ಸಂಬಂಧ ಕೈತಪ್ಪಿ ವಂಚಿತನಾಗಿದ್ದು, ನೊಂದವನಾಗಿರುತ್ತೇನೆ.
ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಅಡಿಯಲ್ಲಿ ಬರುವ ಓ.ಬಿ.ಸಿ ಪ್ರವರ್ಗಕ್ಕೆ ಒಕ್ಕಲಿಗರನ್ನು ಸೇರಿಸುವ ಸಂಬಂಧ 'ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ನವದೆಹಲಿ' ರವರು ಜಸ್ಟೀಸ್ ಎಂ.ಎನ್.ರಾವ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 15-03-2012 ರಂದು ವಸಂತನಗರದಲ್ಲಿ ನಡೆದ 'ಬಹಿರಂಗ ವಿಚಾರಣಾ ಸಭೆಗೆ' ಹಾಜರಾಗಿ ಎಲ್ಲಾ ಒಕ್ಕಲಿಗರನ್ನು ಓ.ಬಿ.ಸಿ ಪ್ರವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸಿರುತ್ತೇನೆ.
ಈ ಘಟನೆಗಳಿಂದ ಪ್ರಭಾವಿತನಾಗಿ ನೇಮಕಾತಿಗಳಲ್ಲಿ ಮೀಸಲಾತಿ ಸಂಬಂಧ ಅಧ್ಯಯನ ನಡೆಸಿದಾಗ ರಾಜ್ಯದಲ್ಲಿ ಒಕ್ಕಲಿಗರಿಗೆ ಯಾವುದೇ ಪ್ರತ್ಯೇಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಇಲ್ಲದೆ ಇರುವುದು ನನಗೆ ತಿಳಿದು ಬಂದಿರುತ್ತದೆ. ಒಕ್ಕಲಿಗ ಸಮುದಾಯ ಹಾಗೂ ವೀರಶೈವ ಲಿಂಗಾಯಿತ ಸಮುದಾಯಗಳಿಗೆ ರಾಜ್ಯ ಸರ್ಕಾರಿ ಸಿಬ್ಬಂದಿ ನೇಮಕಾತಿಯಲ್ಲಿ ನೀಡಿರುವ ಮೀಸಲಾತಿ ಪ್ರಮಾಣ ಶೇ.4 ಮತ್ತು ಶೇ.5 ರಷ್ಟು ಕಾರ್ಯವಿಧಾನದಲ್ಲಿ ತಾರತಮ್ಯ/ಅನ್ಯಾಯ ನಡೆಯುತ್ತಿರುವುದನ್ನು ಗಮನಿಸಿ, ಇದರ ಸಂಬಂಧ ನ್ಯಾಯ ಒದಗಿಸಲು ಹೋರಾಟ ಜನಜಾಗೃತಿ ನಡೆಸಲು "ರಾಜ್ಯ ಒಕ್ಕಲಿಗ ಸಮುದಾಯದ ಮೀಸಲಾತಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ"ವನ್ನು ರಚಿಸಿಕೊಂಡು ಹೋರಾಟಕ್ಕೆ ಧುಮುಕಿರುತ್ತೇನೆ.
ನಾನು ಅಧ್ಯಯನ ನಡೆಸಿದಂತೆ, ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ (3ಎ) ಪ್ರವರ್ಗದ ಅಡಿಯಲ್ಲಿ 4 ಸ್ತರದ ಸಮುದಾಯದ ಗುಂಪಿನ ಮುಖಂಡರನ್ನು ನೋಡಲಾಗಿರುತ್ತದೆ.