ಬೆಂಗಳೂರು, ಫೆಬ್ರವರಿ 8, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಿ.ಎ.ಪಿ.ಎಸ್ (VAPS) ಅಕ್ಷಯ ಫೌಂಡೇಶನ್ ಟ್ರಸ್ಟ್ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಡೈರಿ ಜಾನುವಾರುಗಳಲ್ಲಿ “Haemorrhagic Bowel Syndrome (HBS)" (ಕರುಳಿನ ರಕ್ತಸ್ರಾವ) ನಿಂದ ಹೆಚ್ಚಿನ ಸಂಖ್ಯೆಯ ಹಸುಗಳ ಸಾವಿಗೀಡಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. 

 ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದೇಶಿಯ ಹಾಗೂ ಮಿಶ್ರ ತಳಿಯ ಹಸುಗಳು ಕರುಳಿನ ರಕ್ತಸ್ರಾವ ರೋಗದಿಂದ ಮೃತಪಡುತ್ತಿವೆ ಎಂದು ತಿಳಿಸಿದರು. 

 ಹಾಗಾಗಿ ರಾಜ್ಯ ಸರ್ಕಾರ ಹಸುಗಳಿಗೆ ಬಂದಿರುವ ಕರುಳಿನ ರಕ್ತಸ್ರಾವ ರೋಗದ ಚಿಕಿತ್ಸೆಗೆ ಬಜೆಟ್ ನಲ್ಲಿ ₹500 ಕೋಟಿ ಮೀಸಲಿಡಬೇಕೆಂದು ಒತ್ತಾಯಿಸಿದರು. 

ಜತೆಗೆ ರಾಜ್ಯ ಸರ್ಕಾರವು ಜಾನುವಾರುಗಳ ಕರುಳಿನ ರಕ್ತಸ್ರಾವ ರೋಗದ ಬಗ್ಗೆ ಹೆಚ್ಚಿನ ಸಂಶೋಧನೆ ಹಾಗೂ ಸೂಕ್ತ ಚಿಕಿತ್ಸೆಗೆ ಅಧ್ಯತೆ ನೀಡಬೇಕೆಂದು ಒತ್ತಾಯಿಸಿದರು. 

ಈ ಪತ್ರಿಕಾಗೋಷ್ಠಿಯಲ್ಲಿ ಇವರುಗಳು ಉಪಸ್ಥಿತರಿದ್ದರು. 

1. ಶ್ರೀ. ಸಿದ್ಧೇಶ್ ಕುಮಾರ್ ಆರ್. ಸಂಘಟನಾ ಕಾರ್ಯದರ್ಶಿ, ವಾಪ್ಸ್ ಅಕ್ಷಾ ಫೌಂಡೇಶನ್ ಟ್ರಸ್ಟ್

2. ಶ್ರೀ ಎಂ.ಆರ್.ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ, ಸ್ಥಾಪಕ, ಸ್ವರ್ಣಭೂಮಿ ಗೋಶಾಲಾ, ಚಿತ್ರದುರ್ಗ

3. ಡಾ.ಕೆ.ಪಿ ರಮೇಶ, ಮಾಜಿ ಮುಖ್ಯಸ್ಥರು ಮತ್ತು ಪ್ರಧಾನ ಪಟ್ಟಣ (ನಿವೃತ್ತ), ಬೆಂಗಳೂರಿನ ICAR-NDRI ದಕ್ಷಿಣ ಕ್ಯಾಂಪಸ್