ಬೆಂಗಳೂರು, ಫೆಬ್ರವರಿ 1, 2025 : 

"ದೇಣಿಗೆ ನೀಡುವುದು ಎಂದರೆ ಕೇವಲ ಏನನ್ನೋ ಕೊಡುವುದಷ್ಟೇ ಅಲ್ಲ, ಅದು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದಾಗಿದೆ." ನಾರಾಯಣ ನೇತ್ರಾಲಯದಲ್ಲಿನ ಇಂದಿನ ಈ ಸಮಾರಂಭದ ಉತ್ಸಾಹವು ಈ ಅರ್ಥಗರ್ಭಿತ ನುಡಿಗಟ್ಟಿನ ಹೂರಣವೇ ಆಗಿದೆ. ಕಡಿಮೆ ದೃಷ್ಟಿಯನ್ನು ಹೊಂದಿರುವ ರೋಗಿಗಳಿಗೆ 35 ಔರಾ ವಿಷನ್ ಕನ್ನಡಕಗಳನ್ನು ದೇಣಿಗೆ ನೀಡಿದ ಶ್ರೀ ಮೃದು ಹರಿ ದಾಲ್ಮೀಯಾ ಅವರ ಉದಾರ ಕೊಡುಗೆಯನ್ನು ನಾವು ಅಪಾರವಾದ ಹೆಮ್ಮೆ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತಿದ್ದೇವೆ.

ಶ್ರೀ ದಾಲ್ಮೀಯಾ ಅವರು ಕೈಗಾರಿಕೋದ್ಯಮಿ ಹಾಗೂ ಸುಪ್ರಸಿದ್ದ ದಾಲ್ಮೀಯಾ ಕುಟುಂಬದ ಯಶಸ್ವಿ ಉದ್ಯಮಿಯಾಗಿದ್ದು, ಅವರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ತೀವು ಉತ್ಸಾಹ ಹೊಂದಿರುವ ಲೋಕೋಪಕಾರಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಶ್ರೀ ದಾಲ್ಮೀಯಾ ಅವರ ಔರಾ ವಿಷನ್ ಕನ್ನಡಕಗಳ ಕೊಡುಗೆಯು, ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಅವರ ಬದ್ಧತೆಗೆ ಸಾಕ್ಷಿಯಾಗಿದೆ. SHG ಟೆಕ್ನಾಲಜೀಸ್ ಸಹಯೋಗದೊಂದಿಗೆ ಬೆಂಗಳೂರಿನ ಬ್ರಿಗೇಡ್ ಗೇಟ್‌ವೇಯಲ್ಲಿರುವ ಶೆರಟನ್ ಗ್ರಾಂಡ್‌ನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ದಾಲ್ಮೀಯಾ ದಂಪತಿಗಳು, ನಾರಾಯಣ ನೇತ್ರಾಲಯದ CEO ಗ್ರೂಪ್ ಕ್ಯಾಪ್ಟನ್ ಎಸ್.ಕೆ. ಮಿತ್ತಲ್ VSM, SHG ಟೆಕ್ನಾಲಜೀಸ್‌ನ CEO ಶ್ರೀ ಸೀತಾರಾಮ್ ಮುತ್ತಂಗಿ, ಶಿಶು ನೇತ್ರಶಾಸ್ತ್ರದ ವಿಭಾಗ ಮುಖ್ಯಸ್ಥರಾದ ಡಾ. ಭಾನುಮತಿ ಎಂ ಮತ್ತು ನಾರಾಯಣ ನೇತ್ರಾಲಯದ ಶಿಶು ನೇತ್ರಶಾಸ್ತ್ರದ ಸಲಹೆಗಾರರಾದ ಡಾ. ಸುಮಿತಾ ಮುತ್ತು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಮತ್ತು ಕಾರ್ಯಕ್ರಮದಲ್ಲಿ ಕನ್ನಡಕವನ್ನು ಸ್ವೀಕರಿಸಿದವರಿಗೆ, ISKCON ದೇವಾಲಯದ ಶ್ರೀ ರಘುಕುಲ್ ನಂದನದಾಸ್ ಪ್ರಭುಗಳು ಆಶೀರ್ವದಿಸಿದರು.

ಆಳವಾದ ನಮ್ರತೆ ಮತ್ತು ಉತ್ಸಾಹದ ಗಣಿಯಾಗಿರುವ ಶ್ರೀ M. H. ದಾಲ್ಮೀಯಾ ಅವರು ದೇಣಿಗೆಯ ಅರ್ಥಗರ್ಭಿತ ಮೂಲತತ್ವವನ್ನು ವಿವರಿಸಿ: “ನಾನು ದೇಣಿಗೆಯನ್ನು ನೀಡಬೇಕು ಎಂಬ ಚಿಂತನೆಯೇ ಈ ನೀಡುವ ಕಾರ್ಯಕ್ಕೆ ಮೊದಲ ಪ್ರೇರಣೆಯಾಗಬೇಕು. ನಾವು ಹಿಂದೆ ಮಾಡಿದ ಅಥವಾ ಭವಿಷ್ಯದಲ್ಲಿ ಮಾಡುವ ಕೆಲಸಗಳಿಗೆ ಈ ದೇಣಿಗೆಗಳಿಂದ ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ಈ ಕಾರ್ಯವನ್ನು ಮಾಡಬೇಕು." ಎಂದರು. ತಮ್ಮ ತಂದೆಯ ಬೋಧನೆಗಳ ಅನುಸಾರ ಜೀವನವನ್ನು ನಡೆಸುತ್ತಿರುವ ದಾಲ್ಮೀಯಾ ಅವರು - ತಮ್ಮ ಸ್ವಂತ ವಿಷಯಗಳಿಗೆ ಕಡಿಮೆ ಖರ್ಚು ಮಾಡುವುದು ಮತ್ತು ಅಗತ್ಯವಿರುವವರಿಗಾಗಿ ಹೆಚ್ಚು ಖರ್ಚು ಮಾಡುವುದು ಮಹತ್ವದ್ದಾಗಿದ್ದು, ಇದುವೇ ಸಮಾಜದ ನಿಜವಾದ ಉದ್ದೇಶವಾಗಿದೆ ದೃಷ್ಟಿಹೀನತೆಯನ್ನು ಹೊಂದಿರುವವರು ಇತರ ಅನೇಕ ವಿಷಯಗಳಲ್ಲಿ ಪ್ರತಿಭಾನ್ವಿತರಾಗಿರುತ್ತಾರೆ, ಆದರೆ ದೃಷ್ಟಿ ಎಂಬುದು ಅತ್ಯಗತ್ಯ ಸಂಗತಿಯಾಗಿದೆ ಎಂದು ಅವರು ನಂಬುತ್ತಾರೆ. ಆದ್ದರಿಂದ, ಅವರು ಪ್ರತಿವರ್ಷ ಕಾರ್ನಿಯಲ್ ಕಸಿಗಳಿಗಾಗಿ ಸಕ್ರಿಯವಾಗಿ ದೇಣಿಗೆ ನೀಡಿ ಅನೇಕ ಜನರಿಗೆ ದೃಷ್ಟಿಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಔರಾ ವಿಷನ್ ಕನ್ನಡಕಗಳನ್ನು ದೇಣಿಗೆ ನೀಡುವ ಉಪಕ್ರಮವು ದಾಲ್ಮೀಯಾ ಅವರ ಅನುಕರಣೀಯ ಲೋಕೋಪಕಾರಿ ಕಾರ್ಯಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ.

ಕಾರ್ಯಕ್ರಮದ ನಂತರ, ದಾಲ್ಮೀಯಾ ದಂಪತಿಗಳು ನಾರಾಯಣ ನೇತ್ರಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿ. ಕಣ್ಣಿನ ಚಿಕಿತ್ಸೆಯಲ್ಲಿನ ಸುಧಾರಿತ ತಂತ್ರಜ್ಞಾನದ ಬಗ್ಗೆ ಅರ್ಥಮಾಡಿಕೊಂಡರು. ನಮ್ಮ ಸಂಸ್ಥಾಪಕರಾದ ದಿವಂಗತ ಡಾ. ಕೆ. ಭುಜಂಗ್ ಶೆಟ್ಟಿ ಅವರ ದೂರದೃಷ್ಟಿಯ ತತ್ವಕ್ಕೆ ಅನುಸಾರವಾಗಿ, ನಾರಾಯಣ ನೇತ್ರಾಲಯವು 40ಕ್ಕೂ ಅಧಿಕ ವರ್ಷಗಳಿಂದ, ತಾಂತ್ರಿಕ ಮತ್ತು ವೈದ್ಯಕೀಯ ಪರಿಣತಿಯ ಜೊತೆಗೆ, ಎಲ್ಲರಿಗೂ ಗುಣಮಟ್ಟದ ಕಣ್ಣಿನ ಚಿಕಿತ್ಸೆಯನ್ನು ಲಭ್ಯವಾಗಿಸುವ ಮಹತ್ತರ ಉದ್ದೇಶಕ್ಕೆ ಬದ್ಧವಾಗಿದೆ. ಈ ತತ್ತ್ವಕ್ಕೆ ಅನುಗುಣವಾಗಿ KIDROP, ನಮ್ಮ ಬಡ್ಸ್ ಟು ಬ್ಲಾಸಮ್ಸ್ ಕ್ಲಿನಿಕ್, ತುಮಕೂರಿನಲ್ಲಿರುವ ನಮ್ಮ ಚಾರಿಟೆಬಲ್ ಆಸ್ಪತ್ರೆಯಲ್ಲಿ CVI ಚಿಕಿತ್ಸೆ ಮತ್ತು ರಾಷ್ಟ್ರವ್ಯಾಪಿ ನೇತ್ರದಾನದ ಶಿಬಿರಗಳಂತಹ ಹಲವಾರು ಉಪಕ್ರಮಗಳನ್ನು ನಾವು ಒದಗಿಸುತ್ತಿದ್ದೇವೆ.

"ಉತ್ತಮ ಚಿಕಿತ್ಸೆಯನ್ನು ಒದಗಿಸಲು ವೈದ್ಯಕೀಯ ಸೇವೆಗಳು ತಂತ್ರಜ್ಞಾನದೊಡಗೂಡಿ ವಿಕಸನಗೊಳ್ಳಬೇಕು. ಅದಕ್ಕಾಗಿಯೇ ನಾವು ತಂತ್ರಜ್ಞಾನ ಪರಿಣತರೊಂದಿಗೆ ಸಕ್ರಿಯ ಸಹಯೋಗದಲ್ಲಿ ನಮ್ಮ ರೋಗಿಗಳಿಗಾಗಿ ಸುಧಾರಿತ ಪರಿಹಾರಗಳನ್ನು ಒದಗಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಅರ್ಥಪೂರ್ಣ ಬದಲಾವಣೆಯನ್ನು ಸೃಷ್ಟಿಸಲು ಸಮಾನ ಮನಸ್ಕ ವ್ಯಕ್ತಿಗಳು ಒಟ್ಟಾಗಿ ನೆರವು ನೀಡುವ ಅಗತ್ಯವಿದೆ ಎಂಬ ಧೈಯಕ್ಕೆ ಶ್ರೀ ದಾಲ್ಮೀಯಾ ಅವರ ಈ ಉದಾರ ದೇಣಿಗೆಯು ಸಾಕ್ಷಿಯಾಗಿದೆ. ಅವರ ಬೆಂಬಲವು ನಮ್ಮ ಧೈಯಕ್ಕೆ ಬಲವನ್ನು ತುಂಬುತ್ತದೆ ಮತ್ತು ಸಹಾನುಭೂತಿಯೊಂದಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಿಜವಾಗಿಯೂ ಜೀವನವು ಸಕಾರಾತ್ಮಕವಾಗಿ ಪರಿವರ್ತನೆಯಾಗುತ್ತದೆ ಎಂಬುದನ್ನು ಪುನರುಚ್ಚರಿಸುತ್ತದೆ." ಎಂದು ನಾರಾಯಣ ನೇತ್ರಾಲಯದ CEO ಗ್ರೂಪ್ ಕ್ಯಾಪ್ಟನ್ ಎಸ್.ಕೆ. ಮಿತ್ತಲ್ VSM ಹೇಳಿದರು.

SHG ಟೆಕ್ನಾಲಜೀಸ್‌ನ CEO ಶ್ರೀ ಸೀತಾರಾಮ್ ಮುತ್ತಂಗಿ ಅವರು, ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಗೌರವಾನ್ವಿತ ಗಣ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಡಾ. ಪೂಜಾ ಸರ್ಬಜ್ಞಾ ಮತ್ತು ನಾರಾಯಣ ನೇತ್ರಾಲಯದ CVI ತಂಡವು ತೋರಿದ ಉತ್ಸಾಹ ಮತ್ತು ನಿರಂತರ ಪ್ರತಿಕ್ರಿಯೆಯು, ಸವಾಲುಗಳನ್ನು ಪರಿಹರಿಸಲು ಮತ್ತು ಈ ಸಂಕೀರ್ಣ ಸಾಧನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲು SHG ಟೆಕ್ನಾಲಜೀಸ್‌ನಲ್ಲಿನ ತಮ್ಮ ತಂಡವನ್ನು ಪ್ರೇರೇಪಿಸಿತು ಎಂದು ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.