ಬೆಂಗಳೂರು, ಫೆಬ್ರವರಿ 1, 2025:

ಬೆಂಗಳೂರಿನ ಕೆ.ಆರ್. ಪುರಂ ನ ಡೈಮಂಡ್ ಕಾಲೇಜಿನಲ್ಲಿ "ಡೈಮಂಡ್ ಉತ್ಸವ 2025" ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ 'ಶಿಕ್ಷಣ ಕುಸುಮ ಪ್ರಶಸ್ತಿ' ಪ್ರದಾನ ಮಾಡಲಾಯಿತು.

"ಡೈಮಂಡ್ ಉತ್ಸವ 2025" ಸಮಾರಂಭವನ್ನು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಉದ್ಘಾಟನೆ ಮಾಡಿದರು. 

    ಜತೆಗೆ ಈ ಸಮಾರಂಭದಲ್ಲಿ 2024-2025ನೇ ಸಾಲಿನ ವಿದ್ಯಾರ್ಥಿಗಳಿಗೆ 'ಫೇರ್ ವೆಲ್' ಕಾರ್ಯಕ್ರಮವನ್ನು ಹಮ್ಮಿಕೊಳ್ಳಗಿತ್ತು. ಈ ಸಮಾರಂಭದಲ್ಲಿ AGNR ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ. ಮೀನಾ ಎನ್. ರೆಡ್ಡಿ, ಕಾರ್ಯದರ್ಶಿಯಾದ ಪ್ರವೀಣ್ ಎನ್. ರೆಡ್ಡಿ, ಸದ್ವಿದ್ಯ ಫೌಂಡೇಶನ್ ನ ಅಧ್ಯಕ್ಷರಾದ ಬಿ.ಎನ್. ಸುನಿಲ್, ಕಾರ್ಯದರ್ಶಿಯಾದ ಪ್ರೊ. ಅನಿಲ್ ಕುಮಾರ್ ಎನ್. ಜೋಶಿ, ಡೈಮಂಡ್ ಕಾಲೇಜಿನ ಪ್ರಾಂಶುಪಾಲರಾದ ಎಂ.ಜಿ. ಸಿಂಧು ಅವರು ಉಪಸ್ಥಿತರಿದ್ದರು.