ಡಿಸೆಂಬರ್ 27, 2024

ಬೆಂಗಳೂರು: ಜಿದ್ದಾಜಿದ್ದಿನ ಕಣವಾಗಿದ್ದ 'ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ'ದ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ಸಿ.ಎಸ್.ಷಡಾಕ್ಷರಿ ಅವರು ಪುನರಾಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಬಿ.ಪಿ.ಕೃಷ್ಣಗೌಡ ಅವರ ವಿರುದ್ಧ 65 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಶುಕ್ರವಾರ ಬೆಂಗಳೂರಿನ ಕಬ್ಬನ್‌ಪಾರ್ಕ್ ಆವರಣದ ನೌಕರರ ಸಂಘದಲ್ಲಿ ಅಧ್ಯಕ್ಷ ಮತ್ತು ಖಜಾಂಜಿ ಸ್ಥಾನಕ್ಕೆ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎಸ್.ಷಡಾಕ್ಷರಿಗೆ 507 ಮತಗಳು ಬಂದರೆ, ಬಿ.ಪಿ.ಕೃಷ್ಣಗೌಡಗೆ 442 ಮತಗಳು ಲಭಿಸಿದ್ದವು. ಖಚಾಂಜಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ನಾಗರಾಜ ಆ‌ರ್ .ಜುಮ್ಮನ್ನವರ(ಷಡಾಕ್ಷರಿ ಬಣ), ವಿ.ವಿ.ಶಿವರುದ್ರಯ್ಯ (ಬಿ.ಪಿ.ಕೃಷ್ಣಗೌಡ ಬಣ) ವಿರುದ್ಧ ಕೇವಲ 18 ಮತಗಳ ಅಂತರದಿಂದ ಸೋಲು ಅನುಭವಿಸಿದರು. ವಿ.ವಿ.ಶಿವರುದ್ರಯ್ಯ 485 ಮತ ಪಡೆದರೆ, ನಾಗರಾಜ ಆ‌ರ್.ಜುಮ್ಮನ್ನವರಗೆ 467 ಮತಗಳು ಬಂದಿವೆ. ಬೆಂಗಳೂರು ನಗರ ಜಿಲ್ಲೆಯ 102 ರಾಜ್ಯ ಪರಿಷತ್‌ ಸದಸ್ಯರು, ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ರಾಜ್ಯ ಪರಿಷತ್‌ ಸದಸ್ಯರು, ಜಿಲ್ಲಾ ಕಾರ್ಯದರ್ಶಿ, ತಾಲೂಕು ಶಾಖೆಯ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್‌ ಸದಸ್ಯರು, ಕಾರ್ಯದರ್ಶಿ ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರು ಸೇರಿ ಒಟ್ಟು 949 ಮತದಾರರು ಮತ ಚಲಾಯಿಸಿದ್ದರು.

5.25 ಲಕ್ಷ ಸರ್ಕಾರಿ ನೌಕರರನ್ನು ಹೊಂದಿರುವ ಸಂಘದ ಚುನಾವಣೆ ಈ ಬಾರಿ ಹಲವು ವಿಶೇಷತೆಗೆ ಸಾಯಾಗಿತ್ತು. ಪ್ರಭಾವಿ ಸಚಿವರ ಸಂಬಂಧಿಕರಾದ ಬಿ.ಪಿ.ಕೃಷ್ಣಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮೈಸೂರು ಭಾಗದ ಎಂಎಲ್ಸಿರೊಬ್ಬರು ಕೃಷ್ಣಗೌಡ ಪರವಾಗಿ ತೆರೆಮರೆಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿತ್ತು. ಹಣ,ತೋಳ್ಳಲ ಜತೆಗೆ ಮತದಾರರಿಗೆ ಹಲವು ಆಮಿಷವೊಡ್ಡಲಾಗಿತ್ತು. ಇದರಿಂದಾಗಿ ಷಡಾಕ್ಷರಿ ಮತ್ತು ಕೃಷ್ಣಗೌಡಗೆ ನಡುವೆ ಭಾರಿ ಪೈಪೋಟಿ ನಡೆದಿತ್ತು. 

ಬಿ.ಪಿ.ಕೃಷ್ಣಗೌಡ ಅವರನ್ನು 65 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ಕಬ್ಬನ್‌ಪಾರ್ಕ್ ಆವರಣದ ನೌಕರರ ಸಂಘದಲ್ಲಿ ಅಧ್ಯಕ್ಷ ಮತ್ತು ಖಜಾಂಜಿ ಸ್ಥಾನಕ್ಕೆ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎಸ್.ಷಡಾಕ್ಷರಿಗೆ 507 ಮತಗಳು ಬಂದರೆ, ಬಿ.ಪಿ.ಕೃಷ್ಣಗೌಡಗೆ 442 ಮತಗಳು ಲಭಿಸಿದ್ದವು. ಖಚಾಂಜಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ನಾಗರಾಜ ಆ‌ರ್ .ಜುಮ್ಮನ್ನವರ(ಷಡಾಕ್ಷರಿ ಬಣ), ವಿ.ವಿ.ಶಿವರುದ್ರಯ್ಯ (ಬಿ.ಪಿ.ಕೃಷ್ಣಗೌಡ ಬಣ) ವಿರುದ್ಧ ಕೇವಲ 18 ಮತಗಳ ಅಂತರದಿಂದ ಸೋಲು ಅನುಭವಿಸಿದರು. ವಿ.ವಿ.ಶಿವರುದ್ರಯ್ಯ 485 ಮತ ಪಡೆದರೆ, ನಾಗರಾಜ ಆ‌ರ್.ಜುಮ್ಮನ್ನವರಗೆ 467 ಮತಗಳು ಬಂದಿವೆ. ಬೆಂಗಳೂರು ನಗರ ಜಿಲ್ಲೆಯ 102 ರಾಜ್ಯ ಪರಿಷತ್‌ ಸದಸ್ಯರು, ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ರಾಜ್ಯ ಪರಿಷತ್‌ ಸದಸ್ಯರು, ಜಿಲ್ಲಾ ಕಾರ್ಯದರ್ಶಿ, ತಾಲೂಕು ಶಾಖೆಯ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್‌ ಸದಸ್ಯರು, ಕಾರ್ಯದರ್ಶಿ ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರು ಸೇರಿ ಒಟ್ಟು 949 ಮತದಾರರು ಮತ ಚಲಾಯಿಸಿದ್ದರು.

5.25 ಲಕ್ಷ ಸರ್ಕಾರಿ ನೌಕರರನ್ನು ಹೊಂದಿರುವ ಸಂಘದ ಚುನಾವಣೆ ಈ ಬಾರಿ ಹಲವು ವಿಶೇಷತೆಗೆ ಸಾಯಾಗಿತ್ತು. ಪ್ರಭಾವಿ ಸಚಿವರ ಸಂಬಂಧಿಕರಾದ ಬಿ.ಪಿ.ಕೃಷ್ಣಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮೈಸೂರು ಭಾಗದ ಎಂಎಲ್ಸಿರೊಬ್ಬರು ಕೃಷ್ಣಗೌಡ ಪರವಾಗಿ ತೆರೆಮರೆಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿತ್ತು. ಹಣ,ತೋಳ್ಳಲ ಜತೆಗೆ ಮತದಾರರಿಗೆ ಹಲವು ಆಮಿಷವೊಡ್ಡಲಾಗಿತ್ತು. ಇದರಿಂದಾಗಿ ಷಡಾಕ್ಷರಿ ಮತ್ತು ಕೃಷ್ಣಗೌಡಗೆ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಮತದಾರರು ಷಡಾಕ್ಷರಿ ಅವರನ್ನು ಕೈಹಿಡಿದಿದ್ದಾರೆ.