ಡಿಸೆಂಬರ್ 16, 2024
ಬೆಂಗಳೂರಿನಲ್ಲಿ ಇಂದು ರಾಜರಾಜೇಶ್ವರಿ ದಂತ ವೈದ್ಯಕೀಯ ಮಹಾವಿದ್ಯಾಲಯದ "28ನೇ ಘಟಿಕೋತ್ಸವ ಸಮಾರಂಭ" ನಡೆಯಿತು. ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಆವರಣದಲ್ಲಿನ ಎ.ಸಿ.ಎಸ್ ಕನ್ವೆನ್ಷನ್ ಹಾಲ್ ನಲ್ಲಿ ಪದವಿ ಪ್ರದಾನ ಸಮಾರಂಭ ನಡೆಯಿತು.
ಘಟಿಕೋತ್ಸವ ಸಮಾರಂಭವು ಸಂಸ್ಥಾಪಕ ಕುಲಪತಿಗಳಾದ ಡಾ|| ಎ. ಸಿ. ಷಣ್ಮುಗಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ. ಕೆ. ರಮೇಶ ಅವರು ಪದವಿ ಪ್ರದಾನ ಮಾಡಿದರು.
250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂದು ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.