ಡಿಸೆಂಬರ್ 12, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕೆ.ಎಸ್.ಡಿ.ಎಲ್ ಎಂಪ್ಲಾಯೀಸ್ ಯೂನಿಯನ್' ನ ಅಧ್ಯಕ್ಷರಾದ ಜಿ.ಆರ್. ಶಿವಶಂಕರ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಸಾಲ ನೀಡಲು ಸಾರ್ವಜನಿಕ ಉದ್ದಿಮೆಗಳ ಠೇವಣಿ ಬಳಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಉದ್ದಿಮೆಗಳ ಲಾಭ : ನಷ್ಟದ ಕಂಪನಿಗಳಿಗೆ ಸಾಲ
ಕರ್ನಾಟಕ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಠೇವಣಿ ಬಳಕೆಗೆ ಸಚಿವ ಸಂಪುಟ ಉದ್ದಿಮೆಗಳ ಲಾಭ : ನಷ್ಟದ ಕಂಪನಿಗಳಿಗೆ ಸಾಲ ನೀಡುವ ವಿಷಯದಲ್ಲಿ ಕೆ.ಎಸ್.ಡಿ.ಎಲ್. ಕಾರ್ಖಾನೆಗೆ ಸಂಬಂಧಿಸಿದಂತೆ ಸಚಿವ ಸಂಪುಟದ ತೀರ್ಮಾನವನ್ನು ನಮ್ಮ ಕೆ.ಎಸ್.ಡಿ.ಎಲ್. ಎಂಪ್ಲಾಯೀಸ್ ಯೂನಿಯನ್ ತೀವ್ರವಾಗಿ ಖಂಡಿಸುತ್ತದೆ.
៩.2.40.2. ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜೇಂದ್ರ ಓಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರು 1932ರಲ್ಲಿ ಪ್ರಾರಂಭ ಮಾಡಿ ಅದೇ ರೀತಿ ಮೈಸೂರಿನಲ್ಲಿ ಶ್ರೀಗಂಧದ ಕಾರ್ಖಾನೆಯನ್ನು ಹಾಗೂ ಶಿವಮೊಗ್ಗದಲ್ಲಿ 1944 ರಲ್ಲಿ ಶ್ರೀಗಂಧದ ಎಣ್ಣೆಯ ಕಾರ್ಖಾನೆಯನ್ನು ಪ್ರಾರಂಭ ಮಾಡಿ 107 ವರ್ಷಗಳು ದಾಟಿವೆ. ಸದರಿ ಕಾರ್ಖಾನೆ 95 ಕೋಟಿ ನಷ್ಟದಲ್ಲಿದ್ದು ಆ ಎಲ್ಲಾ ನಷ್ಟವನ್ನು ಭರಿಸಿ ಇಂದು ಕಾರ್ಖಾನೆ 1400 ಕೋಟಿ ಠೇವಣಿ ಇಟ್ಟಿರುವುದು ಸಂತೋಷದ ವಿಷಯ. ಕಾರ್ಖಾನೆಯ ನಷ್ಟದ ಸಮಯದಲ್ಲಿ ಕಾರ್ಮಿಕರು ತಮ್ಮ ಸವಲತ್ತುಗಳನ್ನು ಬದಿಗೊತ್ತಿ ಕಾರ್ಖಾನೆಯನ್ನು ಉಳಿಸಿರುವುದು ಕೆ.ಎಸ್.ಡಿ.ಎಲ್. ಕಾರ್ಖಾನೆಯ ಇತಿಹಾಸವಾಗಿದೆ.
ಕೆ.ಎಸ್.ಪಿ.ಡಿ.ಎಲ್. ಕಾರ್ಖಾನೆ ಮೈಸೂರು, ಶಿವಮೊಗ್ಗ, ದಾಬಸ್ ಪೇಟೆ ಹಾಗೂ ಯಶವಂತಪುರ ಬೆಂಗಳೂರಿನಲ್ಲಿ ತನ್ನ ಜಾಗವನ್ನು ಉಳಿಸಿಕೊಂಡು ಅದನ್ನು ಇನ್ನೂ ಅಭಿವೃದ್ಧಿಪಡಿಸಿ ಸಾವಿರಾರು ಜನ ಕಾರ್ಮಿಕರಿಗೆ ಕೆಲಸ ಕೊಡುವ ಅವಕಾಶವಿದೆ. ಕೆ.ಎಸ್.&ಡಿ.ಎಲ್. ಕಾರ್ಖಾನೆಗೆ ಬರುವ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಕಾರ್ಖಾನೆಯ ಎಲ್ಲಾ ಸ್ಥಳಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಆ ಸ್ಥಳಗಳಲ್ಲಿ ಕರ್ನಾಟಕದ ನಿರುದ್ಯೋಗಿಗಳಿಗೆ ಕೆಲಸ ಕೊಡಲು ಅವಕಾಶವಿದ್ದರು ಸಹ ಬರುವ ಅಧ್ಯಕ್ಷರಿಗೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ, ಸರ್ಕಾರಕ್ಕೆ ಬಹುರಾಷ್ಟ್ರೀಯ ಕಂಪನಿಗಳ ರೀತಿ ಯಾವುದೇ ರೀತಿಯ చిచినా నా ಇಲ್ಲದೇ ಕಾರ್ಖಾನೆಯ ವ್ಯಾಪ್ತಿಯಲ್ಲಿರುವ ಸ್ವತ್ತುಗಳನ್ನು ಬಳಸದಿರುವುದನ್ನು ಮುಂದಿನ ದಿನಗಳಲ್ಲಿ ರಾಜಕಾರಣಿಗಳು ದುರುಪಯೋಗಪಡಿಸುವ ಸಾಧ್ಯತೆಯಿದೆ.
ಈಗಾಗಲೇ ಕೆ.ಎಸ್.&ಡಿ.ಎಲ್.ಗೆ ಮಂಜೂರಾದ 22 ಎಕರೆ ಕೈಗಾರಿಕಾ ಪ್ರದೇಶದ ಜಾಗವನ್ನು ರಾಜಕಾರಣಿಗಳು ಬಳಸಿಕೊಂಡು ಇಂದು ಬೇರೆ ಸ್ಥಳವನ್ನು ನೀಡಿರುವುದು ಸಾಕ್ಷಿಯಾಗಿದೆ. ಮೈಸೂರಿನಲ್ಲೂ ಸಹ ಕೆ.ಎಸ್.ಹಿಡಿ.ಎಲ್. ಜಾಗವನ್ನು ಖಾಸಗೀಯವರು ಬಳಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.