ಬೆಂಗಳೂರಿನಲ್ಲಿ ರಾಜ್ಯ ಒಕ್ಕಲಿಗ ಸಂಘದ ಸದಸ್ಯರಾದ ಜಿ.ಎಸ್. ಉದಯ ಕುಮಾರ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಜಿ.ಎಸ್. ಉದಯಕುಮಾರ ಅವರು ಮಾತನಾಡಿದರು. ರಾಜ್ಯ ಒಕ್ಕಲಿಗರ ಸಂಘವು ಒಕ್ಕಲಿಗ ಸಮುದಾಯದ ಜಾತಿಗಣತಿ ಮಾಡಿಸಬೇಕೆಂದು ಜಿ.ಎಸ್. ಉದಯಕುಮಾರ ಅವರು ಒತ್ತಾಯಿಸಿದರು. 

    ರಾಜ್ಯದಲ್ಲಿರುವ ಒಕ್ಕಲಿಗ ಸಮುದಾಯದ ಜನರು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರವು ಅವೈಜ್ಞಾನಿಕ ಜಾತಿಗಣತಿಯನ್ನು ಜಾರಿಗೆ ತರಲು ಮುಂದಾಗಿದೆ. ಜಾತಿಗಣತಿ ವರದಿ ಒಕ್ಕಲಿಗ ಸಮುದಾಯಕ್ಕೆ ಮಾರಕವಾಗಿದೆ ಎಂದು ಸರ್ಕಾರದ ಸಚಿವರು ಹೇಳಿದ್ದಾರೆ. 

   ಒಂದು ವೇಳೆ ರಾಜ್ಯ ಸರ್ಕಾರ ಅವೈಜ್ಞಾನಿಕ ಜಾತಿ ಗಣತಿಯನ್ನು ಜಾರಿಗೆ ತಂದರೆ ಕಾನೂನಾತ್ಮಕವಾಗಿ ಎದುರಿಸಲು ಸಮುದಾಯದ ವೈಜ್ಞಾನಿಕ ಜಾತಿಗಣತಿ ಅತಿ ಮುಖ್ಯವಾಗಿದೆ. ಹಾಗಾಗಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಸಮುದಾಯದ ಜಾತಿಗಣತಿ ಮಾಡಿಸಬೇಕೆಂದು ಜಿ.ಎಸ್. ಉದಯಕುಮಾರ ಅವರು ಒತ್ತಾಯಿಸಿದರು. 

 ಈ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ನೀಡಲಾಗಿದೆ ಎಂದು ಜಿ.ಎಸ್. ಉದಯಕುಮಾರ ಅವರು ಹೇಳಿದರು.