ಅಕ್ಟೋಬರ್ 21, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ' ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಜಗನ್ನಾಥ ಬಿ. ಶೇಗಜಿ ಅವರು ಮಾತನಾಡಿದರು. 

  ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ ಬಾಕಿ ಮೊತ್ತ ಸುಮಾರು 31 ಸಾವಿರ ಕೋಟಿ ನೀಡಬೇಕಿದೆ ಎಂದು ಜಗನ್ನಾಥ್ ಬಿ. ಶೇಗಜಿ ಅವರು ಹೇಳಿದರು. 

     ಈ ಕೂಡಲೇ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ನೀಡಬೇಕಾಗಿರುವ ₹31 ಸಾವಿರ ಕೋಟಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಜಗನ್ನಾಥ್ ಬಿ. ಶೇಗಜಿ ಅವರು ಒತ್ತಾಯಿಸಿದರು.