ಸೆಪ್ಟೆಂಬರ್ 12, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಕರ್ನಾಟಕ ಕಾರ್ಮಿಕ ಬಂಧು ಹಿತರಕ್ಷಣಾ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಕಾರ್ಮಿಕ ಇಲಾಖೆಯು 2018ರಲ್ಲಿ 1123 ಅಭ್ಯರ್ಥಿಗಳನ್ನು 'ಕಾರ್ಮಿಕ ಬಂಧು' ಸ್ವಯಂಸೇವಕರನ್ನಾಗಿ ನೇಮಿಸಿಕೊಂಡಿತು. ಆದರೆ ಇದುವರೆಗೆ ನಮಗೆ ಗೌರವ ಧನ ನೀಡಿಲ್ಲ ಎಂದು ಸದಸ್ಯರು ಆರೋಪಿಸಿದರು.
ಜತೆಗೆ 'ಕಾರ್ಮಿಕ ಬಂಧು' ಸ್ವಯಂಸೇವಕರನ್ನು ಕಾರ್ಮಿಕ ಇಲಾಖೆಯು ಏಕಾಏಕಿಯಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ನಾವು ಹೈಕೋರ್ಟ್ ನಲ್ಲಿ ಪ್ರಕರಣ ದಾಖಳಿಸಿದ್ದು, ಕಾರ್ಮಿಕ ಬಂಧು ಸ್ವಯಂಸೇವಕರನ್ನು ಕೆಲಸದಿಂದ ತೆಗೆದು ಹಾಕಬಾರದು ಜತೆಗೆ ಹೊಸದಾಗಿ ಕಾರ್ಮಿಕ ಬಂಧು ಸ್ವಯಂಸೇವಕರನ್ನು ನೇಮಕಾತಿ ಮಾಡಿಕೊಳ್ಳಬಾರದು ಎಂದು ಮಾನ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯ ಸರ್ಕಾರವು 'ಕಾರ್ಮಿಕ ಬಂಧು' ಸ್ವಯಂಸೇವಕರನ್ನು ಖಾಯಂಗೊಳಿಸಬೇಕೆಂದು 'ಕರ್ನಾಟಕ ಕಾರ್ಮಿಕ ಬಂಧು ಹಿತರಕ್ಷಣಾ ಸಂಘ' ದ ಸದಸ್ಯರು ಒತ್ತಾಯಿಸಿದರು.