ಆಗಸ್ಟ್ 5, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ"ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಕ್ರಾಂತಿ ರಾಜು ಅವರು ಮಾತನಾಡಿದರು. 

 ಯಾದಗಿರಿ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಅವರ ಸಾವಿಗೆ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ಮತ್ತು ಆತನ ಪುತ್ರ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ವರ್ಗಾವಣೆ ಸಂಬಂಧ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ಮತ್ತು ಆತನ ಪುತ್ರ ಪಿಎಸ್ಐ ಪರಶುರಾಮ್ ಅವರಲ್ಲಿ ಲಂಚ ಕೇಳಿದ್ದಾರೆ ಎಂದು ಕ್ರಾಂತಿ ರಾಜು ಅವರು ಗಂಭೀರವಾಗಿ ಆರೋಪಿಸಿದರು. 

  ಹಾಗಾಗಿ ರಾಜ್ಯ ಸರ್ಕಾರವು ಪಿಎಸ್ಐ ಪರಶುರಾಮ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ತನಿಖೆ ವಹಿಸಬೇಕು ಎಂದು ಕ್ರಾಂತಿ ರಾಜು ಅವರು ಒತ್ತಾಯಿಸಿದರು.