ಜೂನ್ 25, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಶ್ರೀ ಆಂಜನೇಯ ಯುವಕ ಮಂಡಳಿ'ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಅನಿಕೇತ್ ದೇಸಾಯಿ ಅವರು ಮಾತನಾಡಿದರು. 

 ಬೆಂಗಳೂರಿನ ಸಂಜಯನಗರದಲ್ಲಿ ಜೂನ್ 27ರಿಂದ 30ರವರೆಗೆ "ಶ್ರೀ ಆಂಜನೇಯ ಯುವಕ ಮಂಡಳಿ ಮತ್ತು ಶ್ರೀ ಲಕ್ಷೀ ಶೋಭಾನೆ ಮಹಿಳಾ ಮಂಡಳಿಯ ರಜತ ಮಹೋತ್ಸವ ಸಮಾರಂಭ ಯುವವಿಶ್ವೇಶ ಸಮಾಗಮ" ನಡೆಯಲಿದೆ ಎಂದು ಅನಿಕೇತ್ ದೇಸಾಯಿ ಅವರು ಮಾಧ್ಯಮಗಳಿಗೆ ತಿಳಿಸಿದರು.

 ಈ ಕಾರ್ಯಕ್ರಮ 'ಶ್ರೀ ರಾಘವೇಂದ್ರ ಸೇವಾ ಸಮಿತಿ' ವತಿಯಿಂದ ನಡೆಯಲಿದೆ ಎಂದು ತಿಳಿಸಿದರು. 

 ನಾಲ್ಕು ದಿನಗಳವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರತಿದಿನವೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

 ಜೂನ್ 29ರಂದು ಬೆಳಗ್ಗೆ 8:00ಗೆ ಶ್ರೀ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು. ಅದೇ ದಿನ ಸಂಜೆ 5 ಗಂಟೆಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂವಾದ ಕಾರ್ಯಕ್ರಮದಲ್ಲಿ ಮೈಸೂರಿನ ಮಾಜಿ ಸಂಸದರಾದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಸುವರ್ಣ ನ್ಯೂಸ್ ಸಂಸ್ಥೆಯ ಪ್ರಧಾನ ಸಂಪಾದಕರಾದ ಅಜಿತ್ ಹನುಮಕ್ಕನವರ್ ಅವರು ಭಾಗವಹಿಸಲಿದ್ದಾರೆ ಎಂದು ಅನಿಕೇತ್ ದೇಸಾಯಿ ಅವರು ಮಾಧ್ಯಮಗಳಿಗೆ ತಿಳಿಸಿದರು.