ಜೂನ್ 20, 2024
'ಅಂಗವಿಕಲರ ಬದುಕು ಬದಲಿಸುವ ಟೈಟನ್ - ಎಪಿಡಿ ಪಾಲುದಾರಿಕೆ'
ಭಾರತದ ಕಾರ್ಪೊರೇಟ್ ನೇಮಕಾತಿಯಲ್ಲಿ ಇತ್ತೀಚೆಗೆ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿದ್ದು, ಇದು ಹೆಚ್ಚೆಚ್ಚು ಜನರಿಗೆ ಪ್ರಯೋಜನಗಳನ್ನು ಕಲ್ಪಿಸುವ ದಿಕ್ಕಿನಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. 2023 ರಲ್ಲಿ ವಿವಿಧ ಬಗೆಯ ನೇಮಕಾತಿಗಳಲ್ಲಿ ಶೇ 26ರಷ್ಟು ಹೆಚ್ಚಳವಾಗಿದೆ. ಅಂಗವಿಕಲತೆ ಇರುವ 1.3 ಕೋಟಿ ಉದ್ಯೋಗಶೀಲ ಜನರಲ್ಲಿ ಕಾಲು ಭಾಗದಷ್ಟು ಜನರು ಮಾತ್ರ ಸದ್ಯಕ್ಕೆ ಉದ್ಯೋಗನಿರತರಾಗಿದ್ದಾರೆ. ಟೈಟನ್ ಕಂಪನಿ ಲಿಮಿಟೆಡ್, ಅಂಗವಿಕಲರ ಸಂಘದ (ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ -ಎಪಿಡಿ) ಸಹಭಾಗಿತ್ವದಲ್ಲಿ, ಕಳೆದ ದಶಕದಲ್ಲಿ 3,500ಕ್ಕೂ ಹೆಚ್ಚು ಅಂಗವಿಕಲರ ಬದುಕಿನ ಮೇಲೆ ಗಣನೀಯ ಪ್ರಭಾವ ಬೀರಿದೆ. 2023-24 ವರ್ಷವೊಂದರಲ್ಲಿಯೇ ಜಂಟಿ ಪ್ರಯತ್ನಗಳ ಫಲವಾಗಿ ರಚನಾತ್ಮಕ ತರಬೇತಿ ಕಾರ್ಯಕ್ರಮಗಳ ನೆರವಿನಿಂದ 500 ಅಂಗವಿಕಲರ ಸಬಲೀಕರಣಗೊಳಿಸಲಾಗಿದೆ. ಇದು ಕರ್ನಾಟಕದಾದ್ಯಂತ 449 ಅಂಗವಿಕಲರು ಔಪಚಾರಿಕ ಉದ್ಯೋಗಗಳನ್ನು ಪಡೆದುಕೊಳ್ಳಲು ನೆರವಾಗಿದೆ.
ಅವಲೋಕನ
1959ರಲ್ಲಿ ಸ್ಥಾಪನೆಯಾದಾಗಿನಿಂದ, ʼಎಪಿಡಿʼಯು ಅಂಗವಿಕಲರಲ್ಲಿ (ಪಿಡಬ್ಲ್ಯುಡಿ) ಉಪಯುಕ್ತಕರ ಮತ್ತು ಸರಳ ಕೌಶಲಗಳನ್ನು ಕರಗತಮಾಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಆಳವಾಗಿ ಬೇರೂರಿರುವ ಸಾಮಾಜಿಕ ಬದ್ಧತೆಯು ಮೂಲ ತತ್ವವಾಗಿರುವ ಟೈಟನ್ ಕಂಪನಿ ಲಿಮಿಟೆಡ್, ಈ ಸಮುದಾಯಕ್ಕೆ ಸುಸ್ಥಿರ ಸ್ವರೂಪದ ದುಡಿಯುವ ಮಾರ್ಗೋಪಾಯಗಳನ್ನು ಒದಗಿಸಲು ʼಎಪಿಡಿʼ ಜೊತೆಗೆ ಸಹಭಾಗಿತ್ವ ಹೊಂದಿದೆ. ಬೆಂಗಳೂರಿನ ʼಎಪಿಡಿʼ ಕೇಂದ್ರದಲ್ಲಿ ವರ್ಷಗಳಿಂದ ಟೈಟನ್ ಬೀರುತ್ತ ಬಂದಿರುವ ಪ್ರಭಾವವು ಗಮನಾರ್ಹ ಬದಲಾವಣೆಗೆ ಕಾರಣವಾಗಿದೆ.
ಟೈಟನ್ ಮತ್ತು ʼಎಪಿಡಿʼಯ ಸಹಯೋಗವು ಕಳೆದ 10 ವರ್ಷಗಳಲ್ಲಿ ಬೆಂಗಳೂರಿನ ಎಪಿಡಿ ಕೇಂದ್ರದಲ್ಲಿ 3500ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಪ್ರಭಾವ ಬೀರಿದೆ.
ಕಳೆದ ವರ್ಷವಷ್ಟೇ, ರಚನಾತ್ಮಕ ತರಬೇತಿ ಕಾರ್ಯಕ್ರಮಗಳ ಮೂಲಕ ಟೈಟನ್ ಸರಿಸುಮಾರು 500 ಅಂಗವಿಕಲರನ್ನು (ಪಿಡಬ್ಲ್ಯುಡಿ) ಉದ್ಯೋಗ ಪಡೆಯಲು ಸನ್ನದ್ಧಗೊಳಿಸಿದೆ. ಟೈಟನ್ ಬರೀ ಉದ್ಯೋಗ ತರಬೇತಿಯ ಮೇಲೆ ಗಮನ ಕೇಂದ್ರೀಕರಿಸದೆ, ಸೂಕ್ತ ಉದ್ಯೋಗ ಅವಕಾಶಗಳನ್ನೂ ಒದಗಿಸಲು ನೆರವಾಗುತ್ತಿದೆ. ಶೇ 89ರಷ್ಟು ಉದ್ಯೋಗ ನೇಮಕಾತಿ ದರದೊಂದಿಗೆ, ಟೈಟನ್ ಸುಮಾರು 449 ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ತರಬೇತಿಯ ಜೊತೆಗೆ, ಟೈಟನ್ ಮೂಲಸೌಲಭ್ಯ ಅಭಿವೃದ್ಧಿ ಉಪಕ್ರಮಗಳನ್ನು ಸಹ ಕೈಗೊಂಡಿದೆ. ಇದು ʼಎಪಿಡಿʼ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ತರಬೇತಿ ಅನುಭವವನ್ನು ಹೆಚ್ಚಿಸಿದೆ. ಟೈಟನ್ ಇತ್ತೀಚೆಗೆ 50 ರಿಂದ 100 ಜನರು ವಾಸಿಸಲು ಅವಕಾಶ ಇರುವ ಮಹಿಳಾ ವಸತಿ ಸೌಲಭ್ಯ 'ಪಾರಿಜಾತ್' ನಿರ್ಮಿಸಲು ಹಣಕಾಸು ನೆರವು ಕಲ್ಪಿಸಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 350 ಮಹಿಳಾ ಅಭ್ಯರ್ಥಿಗಳು ʼಪಾರಿಜಾತʼದಲ್ಲಿ ನೆಲೆಸಿದ್ದಾರೆ. ಇದಿಷ್ಟೇ ಅಲ್ಲ, ಪಾರಿಜಾತ ನೆಲೆ ಕಲ್ಪಿಸಿದ ನಂತರ, ʼಎಪಿಡಿʼ ಮಹಿಳೆಯರ ದಾಖಲಾತಿಗಳಲ್ಲಿ ಶೇ 24 ರಿಂದ ಶೇ 34 ರಷ್ಟು ಏರಿಕೆ ಕಂಡು ಬಂದಿದೆ.
2023-24ರಲ್ಲಿ ದೊಡ್ಡ ತರಬೇತಿ ಕಾರ್ಯಕ್ರಮಕ್ಕೆ ಟೈಟನ್‌ನ ಗಮನ
ಇದುವರೆಗೆ 400 ಅಂಗವಿಕಲರು ತರಬೇತಿ ಪಡೆದಿದ್ದಾರೆ ಮತ್ತು 359 ಅಂಗವಿಕಲರು ʼಸಂಕಲ್ಪʼ (ಎಸ್‌ಎಎನ್‌ಕೆಎಎಲ್‌ಪಿ) ತರಬೇತಿ ಕಾರ್ಯಕ್ರಮದ ಪ್ರಯೋಜನಕ್ಕೆ ಅರ್ಹರಾಗಿದ್ದಾರೆ. ಇದು ರಿಟೇಲ್ ವಹಿವಾಟು, ಇ-ಕಾಮರ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳಿಗೆ (ಐಟಿಇಎಸ್) ಸಂಬಂಧಿಸಿದ 45-ದಿನಗಳ ತರಬೇತಿ ಮಾದರಿ ಆಗಿದೆ.
50 ಜನರು ತೋಟಗಾರಿಕೆಯ ವಿಶೇಷ ಮಾದರಿ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿದ್ದಾರೆ. ಇವರಲ್ಲಿ 45 ಮಂದಿಯನ್ನು ಉದ್ಯಮಶೀಲತೆ ಮತ್ತು ನರ್ಸರಿ, ತೋಟಗಾರಿಕೆ ಮತ್ತು ಸಂಬಂಧಿತ ಕೃಷಿ ವಿಭಾಗಗಳಲ್ಲಿ ಉದ್ಯೋಗ ಕಲ್ಪಿಸಲಾಗಿದೆ
50 ಜನರಿಗೆ ವಾಹನ ತಯಾರಿಕಾ ವಲಯದಲ್ಲಿ ಉಪಯುಕ್ತಕರ ಹಾಗೂ ಈ ವಲಯದ ಕೌಶಲಗಳೊಂದಿಗೆ ತರಬೇತಿ ನೀಡಲಾಗಿದೆ. ಇವರಿಗೆ ವಿವಿಧ ಬ್ರ್ಯಾಂಡ್‌ಗಳಲ್ಲಿ ಉದ್ಯೋಗ ಅವಕಾಶಗಳಿದ್ದು, ತರಬೇತಿ ಪಡೆದ 45 ಜನರನ್ನು ಯಶಸ್ವಿಯಾಗಿ ಉದ್ಯೋಗ ಕಲ್ಪಿಸಲಾಗಿದೆ.
ʼಎಪಿಡಿʼಯ ತರಬೇತುದಾರರಿಗಾಗಿ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿದೆ. ʼಎಪಿಡಿʼಯ ಪಾಲುದಾರ ʼಎನ್‌ಜಿಒʼಗಳ ಪ್ರಕ್ರಿಯೆ, ವರದಿ ಮತ್ತು ದಾಖಲಾತಿ ಮತ್ತು ನೀತಿಗಳನ್ನು ಬಲಪಡಿಸಲು ನೆರವಾಗಿದೆ.
ವಕ್ತಾರರ ಹೇಳಿಕೆಗಳು
ಮೇಜರ್ ಜೆ. ಜೆ. ಡೊಮಿನಿಕ್, - ಟೈಟನ್ ಕಂಪನಿ ಲಿಮಿಟೆಡ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮುಖ್ಯಸ್ಥ
ʼಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಮ್ಮ ಕಾರ್ಪೊರೇಟ್ ನೀತಿಯ ಆಧಾರ ಸ್ತಂಭವಾಗಿರುವ ಭವಿಷ್ಯವನ್ನು ಪೋಷಿಸುವುದಕ್ಕೆ ಟೈಟನ್ ಕಂಪನಿ ಲಿಮಿಟೆಡ್‌ನಲ್ಲಿ ನಾವು ಬದ್ಧರಾಗಿದ್ದೇವೆ. ಕೆಲವು ಕರಕುಶಲ ವಸ್ತುಗಳ ಮಾರಾಟದೊಂದಿಗೆ ಪ್ರಾರಂಭವಾದ ʼಎಪಿಡಿʼ ಜೊತೆಗಿನ ನಮ್ಮ ಪಾಲುದಾರಿಕೆಯು ಪ್ರಗತಿಪಥದಲ್ಲಿ ಮುಂದುವರೆಯುತ್ತಿರುವುದನ್ನು ನೋಡಿ ನನಗೆ ಸಂತಸವಾಗುತ್ತಿದೆ. 2011ರಿಂದ ಇಲ್ಲಿಯವರೆಗೆ 3,500ಕ್ಕೂ ಹೆಚ್ಚು ಅಂಗವಿಕಲರ ಬದುಕಿನ ಮೇಲೆ ಗಮನಾರ್ಹ ಪ್ರಭಾವ ಬೀರಲಾಗಿದೆ. 2023 ವರ್ಷವೊಂದರಲ್ಲಿಯೇ 500 ಜನರು ರಚನಾತ್ಮಕ ತರಬೇತಿ ಪಡೆದುಕೊಂಡಿದ್ದಾರೆ. ಇವರಲ್ಲಿ 449 ಜನರು ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಸುಸ್ಥಿರ ಸ್ವರೂಪದ ದುಡಿಯುವ ಮಾರ್ಗೋಪಾಯಗಳನ್ನು ಕಲ್ಪಿಸುವುದರ ಮೂಲಕ ಇನ್ನೂ ಹೆಚ್ಚಿನ ಅಂಗವಿಕಲರ ಬದುಕನ್ನು ಬದಲಾಯಿಸಲಿದ್ದೇವೆʼ.