ಜೂನ್ 18, 2024

ಜೆಸಿಐ ಮಾನ್ಯತೆ ಪಡೆದ ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ರೈನ್‌ಬೊ ಚಿಲ್ಡ್ರನ್ಸ್‌ ಹಾಸ್ಪಿಟಲ್‌

*ಬೆಂಗಳೂರು, ಜೂನ್ 18, 2024* : ದೇಶದಲ್ಲಿನ ಮಕ್ಕಳ ಮತ್ತು ಮಹಿಳೆಯರ ಆರೋಗ್ಯ ರಕ್ಷಣೆಗೆ ಖ್ಯಾತವಾಗಿರುವ ಬೆಂಗಳೂರಿನ ಮಾರತಹಳ್ಳಿಯಲ್ಲಿ ಇರುವ ರೈನ್‌ಬೊ ಚಿಲ್ಡ್ರನ್ಸ್ ಹಾಸ್ಪಿಟಲ್ ಮತ್ತು ರೈನ್‌ಬೊ ಹಾಸ್ಪಿಟಲ್‌ನ ಬರ್ತ್‌ರೈಟ್‌ಗೆ ಜಾಯಿಂಟ್ ಕಮಿಷನ್ ಇಂಟರ್‌ನ್ಯಾಷನಲ್‌ನಿಂದ (ಜೆಸಿಐ) ಗೌರವಾನ್ವಿತ ಗುಣಮಟ್ಟ ಅನುಮೋದನೆಯ ಸುವರ್ಣ ಮುದ್ರೆ ('ಗೋಲ್ಡ್ ಸೀಲ್ ಆಫ್ ಕ್ವಾಲಿಟಿ ಅಪ್ರೂವಲ್' ) ದೊರೆತಿದೆ.

ಬೆಂಗಳೂರಿನ ಮಾರತಹಳ್ಳಿಯ ರೈನ್‌ಬೊ ಚಿಲ್ಡ್ರನ್ಸ್ ಹಾಸ್ಪಿಟಲ್ ಮತ್ತು ರೈನ್‌ಬೊದ ಬರ್ತ್‌ರೈಟ್‌ ಪಡೆದುಕೊಂಡಿರುವ ಈ ಮಾನ್ಯತೆಯು, ಆಸ್ಪತ್ರೆಯ ನಿರ್ವಹಣೆ ಮತ್ತು ಚಿಕಿತ್ಸಾ ಶಿಷ್ಟಾಚಾರಗಳ ಕಟ್ಟುನಿಟ್ಟಾದ ಮಾನದಂಡಗಳನ್ನು ಪಾಲಿಸುವ ಆಸ್ಪತ್ರೆಯ ಬದ್ಧತೆಗೆ ನಿದರ್ಶನವಾಗಿದೆ. ಇದು ರೋಗಿಗಳ ಉನ್ನತ ಮಟ್ಟದ ಆರೈಕೆಯನ್ನು ಸುಗಮಗೊಳಿಸುತ್ತದೆ. 

ಆಸ್ಪತ್ರೆಯ ಎಲ್ಲ ತಂಡಗಳಿಂದ ಗಣನೀಯ ಪ್ರಮಾಣದಲ್ಲಿ ಸಮರ್ಪಣಾ ಭಾವನೆಯ ಸೇವೆ ಒದಗಿಸುವುದರ ಅಗತ್ಯ ಇರುವುದನ್ನು ಈ ಸಾಧನೆಯು ಮನದಟ್ಟು ಮಾಡಿಕೊಟ್ಟಿದೆ. 14 ವಿಭಾಗಗಳು ಮತ್ತು 1200 ಕ್ಕೂ ಹೆಚ್ಚು ಮೌಲ್ಯಮಾಪನ ಮಾಡಬಹುದಾದ ಸಂಗತಿಗಳನ್ನು ಒಳಗೊಂಡಿರುವ ಸಮಗ್ರ ಪರಿಶೀಲನಾಪಟ್ಟಿಯನ್ನು ʼಜೆಸಿಐʼ ನಿಖರವಾಗಿ ವಿವರಿಸುತ್ತದೆ.

 ʼರೈನ್‌ಬೊ ಚಿಲ್ಡ್ರನ್ಸ್ ಹಾಸ್ಪಿಟಲ್‌ ಈ ಮಹತ್ವದ ಮೈಲಿಗಲ್ಲನ್ನು ತಲುಪಿರುವುದು ಅಸಾಧಾರಣ ರೀತಿಯಲ್ಲಿ ಆರೋಗ್ಯ ಸೇವೆ ಒದಗಿಸುವ ನಮ್ಮ ನಿರಂತರ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇದು ನಮ್ಮ ತಂಡದ ಒಗ್ಗಟ್ಟು, ಒಟ್ಟಾರೆ ಸಾಮರ್ಥ್ಯ, ಬದ್ಧತೆ ಮತ್ತು ನಮ್ಮ ಆರೋಗ್ಯ ತಜ್ಞರ ಸೂಕ್ಷ್ಮ ಕಾಳಜಿಯನ್ನು ಪ್ರದರ್ಶಿಸುತ್ತದೆ. ನಮ್ಮ ಪ್ರತಿಯೊಬ್ಬ ರೋಗಿಯು ವಿಶ್ವ ದರ್ಜೆಯ ವೈದ್ಯಕೀಯ ಆರೈಕೆ ಪಡೆಯುತ್ತಾರೆ ಎಂಬುದನ್ನು ಖಾತರಿಪಡಿಸುವಂತಹ ಸುರಕ್ಷತೆ ಮತ್ತು ಗುಣಮಟ್ಟದ ಅತ್ಯುತ್ತಮ ಮಾನದಂಡಗಳನ್ನು ಅನುಸರಿಸುವುದಕ್ಕೆ ನಾವು ಬದ್ಧರಾಗಿದ್ದೇವೆʼ ಎಂದು ರೈನ್‌ಬೊ ಚಿಲ್ಡ್ರನ್ಸ್‌ ಹಾಸ್ಪಿಟಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ - ಡಾ.ರಮೇಶ ಕಂಚಾರ್ಲ ಅವರು ಹೇಳಿದ್ದಾರೆ.

ಈ ಗಮನಾರ್ಹ ಸಾಧನೆಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ರೈನ್‌ಬೊ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಉಪಾಧ್ಯಕ್ಷ ಮತ್ತು ಪ್ರಾದೇಶಿಕ ವಹಿವಾಟು ಮುಖ್ಯಸ್ಥ ನಿತ್ಯಾನಂದ್ ಪಿ. ಅವರು, ʼಉನ್ನತ ಕ್ಲಿನಿಕಲ್ ಪರಿಣತಿಯನ್ನು ತಲುಪಿಸುವ ನಮ್ಮ ದೀರ್ಘಕಾಲದ ಬದ್ಧತೆಯ ಪ್ರತಿಫಲವಾಗಿ ಆಸ್ಪತ್ರೆಯ ಪ್ರತಿಯೊಬ್ಬ ಸದಸ್ಯನು ಈ ಮಹತ್ವದ ಮೈಲಿಗಲ್ಲು ಸಾಧಿಸಲು ಕೊಡುಗೆ ನೀಡಿದ್ದಾನೆ. ಈ ಸಾಧನೆಯು ನಮ್ಮ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗಳು ಒದಗಿಸಿದ ಸಹಾನುಭೂತಿಯ ಆರೋಗ್ಯ ಸೇವೆಯ ಜೊತೆಗೆ ನಮ್ಮಲ್ಲಿನ ಒಗ್ಗಟ್ಟು, ಸಾಮೂಹಿಕ ಪ್ರಯತ್ನಗಳು ಮತ್ತು ಅಚಲವಾದ ಸಮರ್ಪಣಾಭಾವನೆಗೆ ನಿದರ್ಶನವಾಗಿದೆ. ಗುಣಮಟ್ಟ ಮತ್ತು ಸುರಕ್ಷತೆಯ ಅಂತರರಾಷ್ಟ್ರೀಯ ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ನಮ್ಮ ರೋಗಿಗಳಿಗೆ ಶ್ರೇಷ್ಠ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಮ್ಮ ಬದ್ಧತೆಗೆ ನಾವು ದೃಢಸಂಕಲ್ಪ ಮಾಡುತ್ತೇವೆʼ ಎಂದು ಹೇಳಿದ್ದಾರೆ.

ʼಅತ್ಯುತ್ತಮ ರೀತಿಯಲ್ಲಿ ಮಕ್ಕಳಿಗೆ ಆರೋಗ್ಯ ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ. ಒಂದು ತಂಡವಾಗಿ, ನಾವು ಮೊದಲಿನಿಂದಲೂ ದಣಿವರಿಯಿಲ್ಲದೆ ನಿರೀಕ್ಷೆಗಳನ್ನು ಮೀರಿ ಕೆಲಸ ಮಾಡುತ್ತ ಬಂದಿದ್ದೇವೆ. ನಮ್ಮ ಅಪಾರ ಜ್ಞಾನ, ಉತ್ತಮ ಪ್ರವೃತ್ತಿಗಳ ಪಾಲನೆ, ಸುರಕ್ಷತೆಗೆ ನೀಡಿರುವ ಒತ್ತು, ಗರಿಷ್ಠ ಪರಿಣತಿ ಹೊಂದಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಬಳಕೆ, ಸಾಕ್ಷ್ಯಗಳನ್ನು ಆಧರಿಸಿದ ಚಿಕಿತ್ಸಾ ಶಿಷ್ಟಾಚಾರಗಳು ರೋಗಿಗಳ ಆರೈಕೆಗೆ ಸಂಬಂಧಿಸಿದ ನಮ್ಮ ಬದ್ಧತೆಯು ಈ ʼಜೆಸಿಐʼ ಮಾನ್ಯತೆ ಪಡೆಯಲು ನೆರವಾಗಿದೆ. ರೋಗಿಯ ಕಾಳಜಿಗೆ ಸಂಬಂಧಿಸಿದ ನಮ್ಮ ಬದ್ಧತೆಗೆ ʼಜೆಸಿಐʼ ಮಾನ್ಯತೆಯು ನಿದರ್ಶನವಾಗಿದೆ. ಇದು ನಮ್ಮ ಆರೋಗ್ಯ ಸೇವೆಯ ಸಂಪೂರ್ಣ ವಿಧಾನಕ್ಕೆ ನೀಡಿರುವ ಮಹತ್ವವನ್ನೂ ಸೂಚಿಸುತ್ತದೆ. ʼಜೆಸಿಐʼ ಮಾನ್ಯತೆ ಪಡೆಯುವುದಕ್ಕೆ ಕ್ಲಿನಿಕಲ್‌ ಗುಣಮಟ್ಟ ಮತ್ತು ರೋಗಿಯ ಸುರಕ್ಷತೆಯ ಅಗತ್ಯವಿದೆ. ಹೀಗಾಗಿ ʼಜೆಸಿಐʼ ಮಾನ್ಯತೆ ಪಡೆಯುವುದು ಸುಲಭದ ಕೆಲಸವಲ್ಲ, ನಿರಂತರವಾಗಿ ಗುಣಮಟ್ಟ ಸುಧಾರಣೆಯ ನಿಟ್ಟಿನಲ್ಲಿನ ನಮ್ಮ ನಿರಂತರ ಪ್ರಯತ್ನಗಳಿಗೆ ಈ ಮಾನ್ಯತೆಯು ಮಹತ್ವದ ತಿರುವು ನೀಡಿದೆʼ ಎಂದು ರೈನ್‌ಬೊ ಚಿಲ್ಡ್ರನ್ಸ್‌ ಹಾಸ್ಪಿಟಲ್‌ನ ಚಿಣ್ಣರ ತೀವ್ರನಿಗಾ ಹಿರಿಯ ಸಲಹೆಗಾರರಾಗಿರುವ ಡಾ. ರಕ್ಷಯ್‌ ಶೆಟ್ಟಿ ಅವರು ಹೇಳಿದ್ದಾರೆ.

ʼರೋಗಿಗಳ ಸುರಕ್ಷತೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಗುರಿಗಳು ನಮ್ಮ ದೈನಂದಿನ ನಡವಳಿಕೆ ಮತ್ತು ಸಂಸ್ಕೃತಿಯಲ್ಲಿ ಅಂತರ್ಗತವಾಗಿವೆ. ರೋಗಿಗಳ ಸುರಕ್ಷತೆ ಮತ್ತು ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು ನಾವು ಗಮನ ಕೇಂದ್ರೀಕರಿಸಿರುವ ಪ್ರಮುಖ ಸಂಗತಿಗಳನ್ನು ಈ ಗುರಿಗಳು ಪ್ರತಿನಿಧಿಸುತ್ತವೆ. ʼಜೆಸಿಐʼ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲು ನರ್ಸಿಂಗ್, ಫಾರ್ಮಸಿ, ಸೌಲಭ್ಯ, ಜೈವಿಕ ವೈದ್ಯಕೀಯ ಎಂಜಿನಿಯರಿಂಗ್, ಪ್ರಯೋಗಾಲಯ, ರೇಡಿಯಾಲಜಿ, ವೈದ್ಯಕೀಯ ದಾಖಲೆಗಳು ಮತ್ತಿತರ ವಿಭಾಗಗಳಲ್ಲಿ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಮೇಲ್ವಿಚಾರಣೆ ಮಾಡಲು ನಿಯಮಿತ ಕಾಲಾವಧಿಯಲ್ಲಿ ವಿವಿಧ ಲೆಕ್ಕಪರಿಶೋಧನೆಗಳನ್ನು ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಗುಣಮಟ್ಟ ಮತ್ತು ರೋಗಿಗಳ ಸುರಕ್ಷತಾ ಮಾನದಂಡಗಳ ಮಧ್ಯೆ ರಾಜಿಯಾಗದಿರುವುದನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳಲು ಕ್ಲಿನಿಕಲ್ ಮತ್ತು ಕ್ಲಿನಿಕಲ್‌ಯೇತರ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಕಾರ್ಯಾಚರಣೆ ಮತ್ತು ಗುಣಮಟ್ಟದ ತಂಡದಿಂದ ಸೌಲಭ್ಯಗಳ ಪರಿಶೀಲನೆ ನಡೆಸಲಾಗುವುದು. ಗುಣಮಟ್ಟದ ಚಿಕಿತ್ಸಾ ಶಿಷ್ಟಾಚಾರಗಳನ್ನು ಖಚಿತಪಡಿಸಿಕೊಳ್ಳಲು ಕ್ಲಿನಿಕಲ್ ಕೇರ್ ಮಾರ್ಗಗಳನ್ನು ಅಳವಡಿಸಲಾಗಿದೆ.