ಮೇ 26, 2024 

ಬೆಂಗಳೂರಿನ ತ್ಯಾಗರಾಜ ನಗರದಲ್ಲಿನ ಶ್ರೀ ಸಾಯಿ ದೇವಸ್ಥಾನದಲ್ಲಿ ಇಂದು ಅದ್ದೂರಿಯಾಗಿ ಮಹಾ ಕುಂಭಾಭಿಷೇಕ ನಡೆಯಿತು.

  ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ 70ನೇ ವಾರ್ಷಿಕೋತ್ಸವದ ನಿಮಿತ್ತ 6 ದಿನಗಳ ಕಾಲ ಧಾರ್ಮಿಕ ಕಾರ್ಯಗಳು ಮತ್ತು ಹೋಮಗಳು ನಡೆದವು. 

    ಕೊನೆಯದಿನವಾದ ಇಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಮಹಾ ಕುಂಬಾಭಿಷೇಕ, ದೇವಸ್ಥಾನದ ಕಳಸ ಪೂಜೆ, ಮತ್ತು ಹೋಮಗಳಾದ ಪ್ರತಿಸ್ಟಾಂಗಾ ಹೋಮ, ಪೂಜಾಗ ಹೋಮ, ಶ್ರೀ ದಕ್ಷಿಣಮೂರ್ತಿ ಹೋಮ, ದತ್ತಾತ್ರೇಯ ಮೂಲ ಮಂತ್ರ ಹೋಮ, ಶ್ರೀ ಸಾಯಿ ಬಾಬಾ ಮೂಲ ಮಂತ್ರ ಹೋಮಗಳು ನಡೆದವು. ಶ್ರೀ ಸಾಯಿಬಾಬಾ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆದವು. ಸುಮಾರು 3 ಸಾವಿರದಷ್ಟು ಭಕ್ತರು ಆಗಮಿಸಿದ್ದರು, ಕೇಂದ್ರವು ಪ್ರತಿ ದಿನ 8 ಸಾವಿರ ಮಕ್ಕಳಿಗೆ ಮತ್ತು 1 ಸಾವಿರ ರೋಗಿಗಳಿಗೆ ಉಚಿತವಾಗಿ ಊಟ ಪ್ರಸಾದ ವಿತರಣೆ ಮಾಡಲಾಗುತ್ತಿದೆ.