ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಮಹಾ ನಾಯಕ ಅಂಬೇಡ್ಕರ್ ಸೇವಾ ಸಮಿತಿ"ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಂ. ಹರೀಶ್ ಬಾಬು ಅವರು ಮಾತನಾಡಿದರು. 

 2008ರ ಅಕ್ಟೋಬರ್ 2ರಂದು ದುಬೈನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಯೋತ್ಪಾದಕ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದ್ದ ಆರೋಪಿಯಾದ ಝಾಕಿರ್ ನಾಯಕ್ ಆಪ್ತರಾದ ಸಿ.ಎ. ಖಲೀಲ್ ಅವರನ್ನು "ಹಮ್ ಸಬ್ ಕಾ ನೇತ" ಎಂದು ಹೇಳಿದ್ದಾರೆ. 

 ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕೆಂದು ಎಂ. ಹರೀಶ್ ಬಾಬು ಅವರು ಒತ್ತಾಯಿಸಿದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಜಂಬುದ್ವೀಪ ಸಿದ್ದರಾಜು ಅವರು ಉಪಸ್ಥಿತರಿದ್ದರು.