ಏಪ್ರಿಲ್ 25, 2024

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 28 ರಂದು ಸಿಂಫೋನಿ ಸ್ವರ ಪ್ರತಿಷ್ಠಾನ ವತಿಯಿಂದ "ರಾಜ ಪುನೀತೋತ್ಸವ" ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಸಾಧಕಿಯರಿಗೆ ಸಿಂಫೋನಿ ರಾಜರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಿಂಪೋನಿ ಸ್ವರ ಪ್ರತಿಷ್ಠಾನದ ಮುಖ್ಯಸ್ಥರಾದ ಸಿಂಫೋನಿ ಶಿವು ಅವರು ಮಾಧ್ಯಮಗಳಿಗೆ ತಿಳಿಸಿದರು.

ಏಪ್ರಿಲ್ 28ರಂದು ರಾಜ್ ನಮನ, ಪುನೀತ್ ನಮನ ಸಂಗೀತ ರಸ ಸಂಜೆ ಕಾರ್ಯಕ್ರಮ

ಸಾಧಕ/ಸಾಧಕಿಯರಿಗೆ ಸಿಂಪೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರಧಾನ

ಸಿಂಪೋನಿ ಸ್ವರ ಪ್ರತಿಷ್ಠಾನ ವತಿಯಿಂದ ಎರಡನೇಯ ವರ್ಷದ ರಾಜ ಪುನೀತೋತ್ಸವ ಸಮಾರಂಭ , ರಾಜ್ ನಮನ, ಪುನೀತ್ ನಮನ ಸಂಗೀತ ಸಂಜೆ ಮತ್ತು ಸಿಂಫೋನಿ ರಾಜರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ದಿನಾಂಕ 28ರಂದು ಭಾನುವಾರ ಸಂಜೆ 6ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಇದರ ಕುರಿತು ಸಿಂಪೋನಿ ಸ್ವರ ಪ್ರತಿಷ್ಠಾನದ ಅಧ್ಯಕ್ಷರಾದ ಸಿಂಪೋನಿ ಶಿವುರವರು, ಸೌಂಡ್ ಆಫ್ ಮ್ಯೂಜಿಕ್ ಮುಖ್ಯಸ್ಥರಾದ ಕೆ.ಗುರುರಾಜ್ ,ಚಲನಚಿತ್ರ ರಂಗದ ಸಮನ್ವಯಕಾರರಾದ ಎಸ್.ಕೆ.ಆನಂತ್ ,ಪ್ರಧಾನ ಕಾರ್ಯದರ್ಶಿ ಶ್ರೀಲತಾ ರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.

 ಅಧ್ಯಕ್ಷರಾದ ಸಿಂಪೋನಿ ಶಿವು ರವರು ಮಾತನಾಡಿ ಕನ್ನಡ ನಾಡಿಗೆ ಎರಡು ಅಮೂಲ್ಯ ವಜ್ರಗಳು ಮೇರುನಟ ಡಾ||ರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು . ಚಲನಚಿತ್ರ ಅಭಿನಯದಂತೆ ನೀಜ ಜೀವನದಲ್ಲಿಯೊ ಸಹ ಆದರ್ಶ ಪುರುಷರಂತೆ ಬದುಕಿ ಇಡಿ ಸಮಾಜಕ್ಕೆ ಮಾದರಿಯಾದರು.

ಡಾ.ರಾಜ್.ಮತ್ತು ಪುನೀತ್ ರವರ ಸವಿನೆನಪಿನಲ್ಲಿ ಸಿಂಪೋನಿ ಸ್ವರ ಪ್ರತಿಷ್ಠಾನ ರವೀಂದ್ರ ಕಲಾಕ್ಷೇತ್ರದಲ್ಲಿ 28ರಂದು ಸಂಜೆ 6ಗಂಟೆಗೆ ರಾಜ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ ಪುನೀತೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ಡಿ.ಎಂ.ಸಾಲಿ, ಯುವ ನಾಯಕ ನಟ ಯುವ ರಾಜ್ ಕುಮಾರ್, ಐಪಿಎಸ್ ಪೊಲೀಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಲಹರಿ ಆಡಿಯೊ ಸಂಸ್ಥೆಯ ಲಹರಿ ವೇಲು, ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಎನ್.ಆರ್.ರಮೇಶ್, ಸೌಂಡ್ ಆಫ್ ಮ್ಯೂಸಿಕ್ ಮಾಲೀಕರಾದ ಗುರುರಾಜ್, ಕರ್ನಾಟಕ ವಾದ್ಯಗೋಷ್ಟಿ ಕಲಾವಿದರು ಮಹಾಸಂಘದ ಅಧ್ಯಕ್ಷರಾದ ಶಂಕರ್ ರವರು ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಸಿಂಪೋನಿ ಸಂಸ್ಥೆಯ 100ಗಾಯಕ, ಗಾಯಕಿಯರಿಂದ ಬೊಂಬೆ ಹೇಳುತೈತೆ ಸಮೂಹ ಗೀತೆ ಗಾಯನ

ಡಾ.ರಾಜ್ ಮತ್ತು ಪುನೀತ್ ರಾಜ್ ಕುಮಾರ್ ರವರ ಚಿತ್ರಗಳ ಭೀತಿ ಪತ್ರ ಪ್ರದರ್ಶನ ಮತ್ತು ವಿಶೇಷ ನೃತ್ಯಗಳು, ತುಣುಕು ಚಿತ್ರಗಳು, ಪ್ರತಿರೂಪಕಗಳು ಪ್ರದರ್ಶನ ಏರ್ಪಡಿಸಲಾಗಿದೆ

ಸಿಂಪೋನಿ ರಾಜ್ ರತ್ನ ಪ್ರಶಸ್ತಿಯನ್ನು ಡಿ.ಎಂ.ಸಾಲಿ, ಕೆ.ಗುರುರಾಜ್, ರಾಜಣ್ಣ ಕೊರವಿ, ಡಾ.ಪ್ರಶಾಂತ್, ವೇಣುಗೋಪಾಲ್ ನಾಯಕ್, ವಿ.ಪಿ.ಲಡ್ಡಾ, ಶ್ರೀರಾಜ್, ಹಾಲುಸ್ವಾಮಿ, ಸತ್ಯಣ್ಣ, ವೈ.ಬಿ.ಹೆಚ್.ಜಯದೇವ್ ರವರಿಗೆ ಪ್ರಧಾನ

ಸಿಂಪೋನಿ ಪುನೀತ್ ರತ್ನ* ಪ್ರಶಸ್ತಿಯನ್ನು ಮಹೇಂದ್ರ ಮನ್ನೋತ್, ಡಾ.ಗೋಪಾಲಕೃಷ್ಣ, ಪಿ.ಉಷಾಕಿರಣ್, ಸುಮಿತ್ರ ರಾಮ್ ದಾಸ್, ಸುರೇಶ್ ಗೌಡ, ಡಾ.ರಾಜೇಂದ್ರ, ಡಾ.ದೇವೇಂದ್ರ ರೆಡ್ಡಿ,ಕೆ.ಎನ್.ವಾಸುದೇವ ಅಡಿಗ, ಡಾ.ಪ್ರವೀಣ್ ಕುಮಾರ್, ಪ್ಲವರ್ ಧೃವರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. 

ಹಾಸ್ಯನಟ ಬೆಂಗಳೂರು ನಾಗೇಶ್, ನಟಿ ಶೈಲಶ್ರೀರವರಿಗೆ ವಿಶೇಷ ಸನ್ಮಾನ ಸಮಾರಂಭ

ಡಾ.ರಾಜ್ ನಮನ ಮತ್ತು ಪುನೀತ್ ನಮನ ಸಂಗೀತ ರಸ ಸಂಜೆಯಲ್ಲಿ ನಾಡಿನ ಪ್ರಖ್ಯಾತ ಗಾಯಕ, ಗಾಯಕಿಯರಿಂದ ಗೀತೆ ಗಾಯನ ಏರ್ಪಡಿಸಲಾಗಿದೆ ಎಂದು ಹೇಳಿದರು.