ಏಪ್ರಿಲ್ 17, 2024

ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿರುವ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ 12 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ . 

 ಕೇಂದ್ರ ಲೋಕಸೇವಾ ಆಯೋಗದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದು, ಶೇಕಡಾ 50ರಷ್ಟು ಅಭ್ಯರ್ಥಿಗಳು ಇಂಡಿಯಾ ಫಾರ್ ಐಎಎಸ್ ಅಕಾಡೆಮಿಗೆ ಸೇರಿದ್ದಾರೆ. 

  ರಾಜ್ಯದ ಒಟ್ಟು 25 ಮಂದಿ ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ 12 ಮಂದಿ ಚಂದ್ರ ಲೇಔಟ್ ನಲ್ಲಿರುವ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಗೆ ಸೇರಿದವರಾಗಿದ್ದಾರೆ. 

 ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯ ನಾಗೇಂದ್ರ ಬಾಬು ಕುಮಾರ್ (160), ಎನ್ ಎಂ ಶಶಾಂತ್ (459), ಐ ಎಂ ಮೇಘನ (589), ಡಾಕ್ಟರ್ ಭಾನುಪ್ರಕಾಶ್ (600), ಕೆ ಎಚ್ ಸುಮಾ (635), ಶಾಂತಪ್ಪ ಕುರುಬರ (644), ಎನ್ ತೇಜಸ್ (668), ಕೆ ನವ್ಯ (696), ಕೆ ಟಿ ಮೇಘನ (721), ಎನ್ ವಿವೇಕ್ ರೆಡ್ಡಿ (741), ಸೃಷ್ಟಿ ದೀಪ್ (748), ಎನ್ ಎ ಹಂಸಶ್ರೀ (866) ಅವರು ವ್ಯಕ್ತಿತ್ವ ಪರೀಕ್ಷೆಯಾಗುವ ವಿವಿಧ ಹಂತಗಳಲ್ಲಿ ಅಕಾಡೆಮಿಯಿಂದ ಮಾರ್ಗದರ್ಶನ ಪಡೆದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.