ಏಪ್ರಿಲ್ 15, 2024
ಬೆಂಗಳೂರಿನ ಕಬ್ಬನ್ ಪೇಟೆಯ 'ಶ್ರೀ ಅಣ್ಣಮ್ಮ ದೇವಿ ಸೇವಾ ಕಮಿಟಿ' ಯ ಸದಸ್ಯರು 85ನೇ ಅಣ್ಣಮ್ಮ ದೇವಿಯವರ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದರು.
ಏಪ್ರಿಲ್ 8 ರಿಂದ ಏಪ್ರಿಲ್ 15 ರವರೆಗೆ ಒಂದು ವಾರದ ಕಾಲ ಶ್ರೀ ಅಣ್ಣಮ್ಮ ದೇವಿ ಅವರ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು ಎಂದು ಕಾರ್ಯದರ್ಶಿಯಾದ ಎಮ್ ಕುಪ್ಪುಸ್ವಾಮಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ಒಂದು ವಾರದ ಕಾಲ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ಅಣ್ಣಮ್ಮ ದೇವಿ ಅವರಿಗೆ ಹಾಲಿನ ಅಭಿಷೇಕ, ಚಂಡಿಕಾ ಹೋಮ ಹಾಗೂ ಗಿರಿಜಾ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದು ಎಂ ಕುಪ್ಪುಸ್ವಾಮಿ ಅವರು ಮಾಹಿತಿ ನೀಡಿದರು.