ಏಪ್ರಿಲ್ 2, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಹಸಿರು ಪ್ರತಿಷ್ಠಾನ"ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಕೆ ಜಿ ಕುಮಾರ್ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಅನುಚ್ಛೇದ 371 ಜೆ ಅಡಿಯಲ್ಲಿ ಹೈದರಾಬಾದ್ ಕರ್ನಾಟಕ ಜನರಿಗೆ ವಿಶೇಷ ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಮೈಸೂರು ಕಿತ್ತೂರು ಹಾಗೂ ಕರಾವಳಿ ಕರ್ನಾಟಕ ಭಾಗದ ಜನರಿಗೆ ಸೂಕ್ತ ರೀತಿಯಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂದು ಕೆ.ಜಿ. ಕುಮಾರ್ ಅವರು ಆರೋಪಿಸಿದರು.
ಹಾಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಗಮನಹರಿಸಿ ರಾಜ್ಯದ ಎಲ್ಲಾ ಭಾಗಗಳ ಅಭ್ಯರ್ಥಿಗಳಿಗೆ ಸಮಾನವಾಗಿ ಉದ್ಯೋಗ ಸಿಗಬೇಕೆಂದು ಕೆ.ಜಿ. ಕುಮಾರ್ ಅವರು ಒತ್ತಾಯಿಸಿದರು.