ಮಾರ್ಚ್ 4, 2024
ಮಡಿಕೇರಿ ಸಮೀಪದ ನಾಪೋಕ್ಲು ಪಟ್ಟಣದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 28ರ ವರೆಗೆ ಪ್ರತಿಷ್ಠಿತ "24ನೇ ಕೊಡವ ಹಾಕಿ ಉತ್ಸವ" ನಡೆಯಲಿದೆ.
ಈ ಬಾರಿ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕುಂದ್ಯೋಳಂಡ ಕುಟುಂಬವು ಕೊಡವ ಹಾಕಿ ಉತ್ಸವವನ್ನು ಆಯೋಜನೆ ಮಾಡುತ್ತಿದೆ.
ಕೊಡವ ಹಾಕಿ ಕಾರ್ನಿವಲ್ ನಲ್ಲಿ ಸುಮಾರು 400 ತಂಡಗಳು ಭಾಗವಹಿಸಲಿವೆ. ಈ ಹಾಕಿ ಉತ್ಸವವು ಕೊಡವ ಸಮುದಾಯದ ಬಾಂಧವ್ಯವನ್ನು ಬೆಳೆಸುವ ಮತ್ತು ಕೊಡವ ಪರಂಪರೆಯನ್ನು ಸಂರಕ್ಷಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಸಂಚಾಲಕರಾದ ದಿನೇಶ್ ಕಾರ್ಯಪ್ಪ ಅವರು ಮಾಧ್ಯಮಗಳಿಗೆ ತಿಳಿಸಿದರು.