ಫೆಬ್ರವರಿ 19, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಕೆ.ಎನ್. ವೆಂಕಟೇಶ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

   ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಲ್ಲುಕುಂಟೆ ಗ್ರಾಮದ ಸರ್ವೇ ನಂಬರ್ 21ಕ್ಕೆ ಸೇರಿರುವ 28 ಎಕರೆ ಜಮೀನನ್ನು ಕೆಲವು ಅಧಿಕಾರಿಗಳು ಅಕ್ರಮವಾಗಿ ಬೆಂಗಳೂರಿನ ಕೋರಮಂಗಲ ಮೂಲದ ಕೆ.ಜೆ. ಜಾರ್ಜ್ ಅವರಿಗೆ ಮಾರಾಟ ಮಾಡಲಾಗಿದೆ ಎಂದು ಕೆ.ಎನ್ ವೆಂಕಟೇಶ್ ಅವರು ಆರೋಪಿಸಿದರು.

  ತಪ್ಪಿತಸ್ಥ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕಿದ್ದು ಕೆ.ಎನ್. ವೆಂಕಟೇಶ್ ಅವರು ಒತ್ತಾಯಿಸಿದರು.