ಬೆಂಗಳೂರು, ಫೆಬ್ರವರಿ 7, 2024

Sponsored

ओम धगाल - पूर्व प्रदेश कार्यकारिणी सदस्य भाजपा युवा मोर्चा

ओम धगाल की और से हिंडोली विधानसभा क्षेत्र एवं बूंदी जिले वासियों को रौशनी के त्यौहार दीपावली की हार्दिक बधाई व शुभकामनाएं

    ದೇಶದಲ್ಲಿನ 12 ಜ್ಯೋತಿರ್ಲಿಂಗಗಳ ದರ್ಶನ ಮಾಡಲು ಬೈಕ್‌ ಮೂಲಕ ಸಾಹಸಮಯವಾಗಿ ಧಾರ್ಮಿಕ ಯಾತ್ರೆ ಕೈಗೊಂಡ ಮೈಕ್ರೋಲ್ಯಾಬ್ಸ್‌ ನ ಪ್ರವೀಣ್‌ ಸಿಂಗ್‌

    ದೇಶದ ಪ್ರತಿಷ್ಠಿತ ಔಷಧಿ ಕಂಪೆನಿಯಾದ ಮೈಕ್ರೋ ಲ್ಯಾಬ್ಸ್‌ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಪ್ರವೀಣ್‌ ಸಿಂಗ್‌ ಅಸಮಾನ್ಯ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಭಾರತದಾದ್ಯಂತ ಇರುವ 12 ಜ್ಯೋತಿರ್ಲಿಂಗಗಳನ್ನು ಬೈಕ್‌ ಮೂಲಕ ಸುತ್ತಾಡಿ ಗಮನ ಸೆಳೆದಿದ್ದಾರೆ. ಧಾರ್ಮಿಕ ಪ್ರವಾಸಕ್ಕೆ ಹೊಸ ಆಯಾಮ ನೀಡಿದ್ದಾರೆ.  

      ಪ್ರವೀಣ್ ಸಿಂಗ್‌ ಅವರಿಗೆ ಬೈಕ್‌ ರೈಡಿಂಗ್‌ ಪ್ರವೃತ್ತಿಯಾಗಿದ್ದು, “ಉದ್ದೇಶದಿಂದ ಬೈಕ್‌ ಚಾಲನೆ – ರೈಡ್‌ ವಿತ್‌ ಪರ್ಪಸ್‌” ಎಂಬುದು ಅವರ ಧ್ಯೇಯವಾಕ್ಯ. ಇದೇ ಸದಾಶಯದೊಂದಿಗೆ ಅವರು ಸಾಂಸ್ಕೃತಿಕ ಮತ್ತು ಧಾರ್ಮಿಕ ಶ್ರೀಮಂತಿಕೆಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ. 12 ಜ್ಯೋತಿರ್ಲಿಂಗಗಳನ್ನು ಭಗವಾನ್‌ ಶಿವನ ಅಭಿವ್ಯಕ್ತಿಗಳಾಗಿ ಪೂಜಿಸಲಾಗುತ್ತದೆ. ಈ ದೇವಾಲಯಗಳಲ್ಲಿನ ಪ್ರಾಥಮಿಕ ಚಿತ್ರಣವೆಂದರೆ ಲಿಂಗ. ಇದು ಶಿವನ ಅನಂತ ಸ್ವಭಾವವನ್ನು ಸಂಕೇತಿಸುತ್ತದೆಯಲ್ಲದೇ ದೈವಿಕ ಶಕ್ತಿಯನ್ನು ಹೊರ ಸೂಸುತ್ತದೆ. ಜ್ಯೋತಿರ್‌ ಲಿಂಗ ಶಬ್ದ ಶಿವನ ವಿಕಿರಣಗಳ ಸೂಚಕವಾಗಿವೆ. ಈ ಸ್ಥಳಗಳು ದೈವಿಕ ಬೆಳಕು ಮತ್ತು ಮಹತ್ವವನ್ನು ಸಾರುತ್ತವೆ.  

      ಇಂತಹ ಮಹತ್ವದ ಮತ್ತು ಪವಿತ್ರ ಯಾತ್ರಾ ಸ್ಥಳಗಳಾದ 12 ಜ್ಯೋತಿರ್‌ ಲಿಂಗಗಳ ದರ್ಶನವನ್ನು ಪ್ರವೀಣ್‌ ಅವರು 20 ದಿನಗಳಲ್ಲಿ ಪೂರ್ಣಗೊಳೀಸಿದರು. ಒಟ್ಟು 8,500 ಕಿಲೋಮೀಟರ್‌ ಗೂ ಅಧಿಕ ದೂರದ ಪಯಣವನ್ನು ಫಲಪ್ರದವಾಗಿ ಪೂರ್ಣಗೊಳಿಸಿದರು. ಇದು ಕೇವಲ ಬೈಕ್‌ ಸವಾರಿಯಲ್ಲ. ನಮ್ಮ ಸಂಸ್ಕೃತಿಯಲ್ಲಿ ಹುದುಗಿರುವ ಆಧ್ಯಾತ್ಮಿಕ ಪರಂಪರೆಯನ್ನು ಬೆಳಗಿಸುವ, ಜ್ಯೋತಿರ್ಲಿಂಗಗಳು ದೈವಿಕ ಶಕ್ತಿಯ ರೂಪಕಗಳು. ಯುವ ಸಮೂಹವನ್ನು ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ. ಶ್ರೀಮಂತ ಪರಂಪರೆಯನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಧಾರ್ಮಿಕ ಸಾಹಸ ಯಾತ್ರೆ ಕೈಗೊಂಡಿದ್ದಾಗಿ ಅವರು ಹೇಳಿದರು.

   ಮೈಕ್ರೋ ಲ್ಯಾಬ್ಸ್‌ ನ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ವಿ.ಆರ್.‌ ರಾಮಕೃಷ್ಣ ಮಾತನಾಡಿ, “ಬೈಕ್‌ ಸವಾರಿ ವಾರಾಂತ್ಯದಲ್ಲಿ ಊಟ, ಉಪಹಾರಕ್ಕಾಗಿ ಅಲ್ಲ, ಜನಪ್ರಿಯ ತಾಣಗಳ ವೀಕ್ಷಣೆಗೂ ಅಲ್ಲ. ಆದರೆ ಪ್ರವೀಣ್‌ ಅವರು ಸ್ಫೂರ್ತಿದಾಯಕವಾಗಿ ಧಾರ್ಮಿಕ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವೈಯಕ್ತಿಕ ಭಾವನೆಗಳನ್ನು ಸಾಕಾಗೊಳಿಸುವ ಜೊತೆಗೆ ಕೆಲಸದ ಬದ್ಧತೆಯನ್ನು ಸಮರ್ಥವಾಗಿ ಸಮತೋಲನವೊಗಳಿಸುವ ಪ್ರವೀಣ್‌ ಅವರಂತಹ ವ್ಯಕ್ತಿಗಳನ್ನು ನಾವು ಪ್ರಶಂಸಿಸುತ್ತೇವೆ ಎಂದರು.