ಜನವರಿ 30, 2024 

   ಬೆಂಗಳೂರಿನ ಪದ್ಮನಾಭನಗರದಲ್ಲಿ ದಿನೇಶ್ ಮಗರ್ ಎಂಬ ಅದ್ಭುತ ಚಿತ್ರ ಕಲಾವಿದರಿದ್ದಾರೆ. ಚಿಕ್ಕಂದಿನಿಂದ ಕಲೆಯನ್ನೇ ಜೀವವಾಗಿಸಿಕೊಂಡಿರುವ ದಿನೇಶ್ ಮಗರ್ ಅವರು ಕರ್ನಾಟಕದಲ್ಲಿರುವ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. 

  ಹಿತ್ತಾಳೆಯ ಶೀಟ್ ಗಳ ಮೇಲೆ ದೇವಾನು ದೇವತೆಗಳ ಚಿತ್ರಗಳನ್ನು ಚಿತ್ರಿಸುವ ಮೂಲಕ ಅತ್ಯಧ್ಭುತ ಕಲಾಕೃತಿಗಳನ್ನು ಕಲಾವಿದ ದಿನೇಶ್ ಅವರು ಸೃಷ್ಟಿಸುತ್ತಾರೆ. ಜತೆಗೆ ದಿನೇಶ್ ಅವರು ಎಲ್ಲಾ ಧರ್ಮದ ದೇವರುಗಳನ್ನು ಅತ್ಯಂತ ಸುಂದವಾಗಿ ಚಿತ್ರಿಸುತ್ತಾರೆ.

    ದಿನೇಶ್ ಮಗರ್ ಅವರ ಬಳಿ ₹10 ಸಾವಿರದಿಂದ ₹8 ಲಕ್ಷದವರೆಗಿನ ಕಲಾಕೃತಿಗಳು ಲಭ್ಯವಿವೆ. ಕೆಲವು ಕಲಾಕೃತಿಗಳನ್ನು ಚಿತ್ರೀಸಲು ದಿನೇಶ್ ಅವರು 6 ತಿಂಗಳು ಅವಧಿಯನ್ನು ತೆಗೆದುಕೊಂಡಿದ್ದಾರೆ. ಅತ್ಯಂತ ಪರಿಶ್ರಮಿಯಾದ ಕಲಾವಿದ ದಿನೇಶ್ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.

   ತಾವು ರಚಿಸಿರುವ ಕಲಾಕೃತಿಗಳನ್ನು ಚಿತ್ರ ರಸಿಕರಿಗೆ ಮಾರಾಟ ಮಾಡಲು ದಿನೇಶ್ ಅವರು ಪದ್ಮನಾಭನಗರದಲ್ಲಿ "ಕಲ್ಪ ಕಾರ್ಪೊರೇಟ್ ಆರ್ಟ್ಸ್"ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ವಿವಿಧ ಶೈಲಿಯ ಕಲಾಕೃತಿಗಳನ್ನು ರಚಿಸುವ ದಿನೇಶ್ ಅವರು ಹಿತ್ತಾಳೆಯ ಶೀಟ್ ನಲ್ಲಿ ಸೃಷ್ಟಿಸುವ ಕಲಾಕೃತಿ ಅತ್ಯಂತ ಸುಂದರವಾಗಿರುತ್ತದೆ.

   ಹಿತ್ತಾಳೆಯ ಶೀಟ್ ನಲ್ಲಿ ವಜ್ರ ಹಾಗೂ ಚಿನ್ನ ಲೇಪಿತ ಕಲಾಕೃತಿಗಳನ್ನು ಸೃಷ್ಟಿಸುವ ದೇಶದ ಏಕೈಕ ಕಲಾವಿದ ದಿನೇಶ್ ಮಗರ್ ಆಗಿದ್ದಾರೆ. ಇವರ ಕುಂಚದಿಂದ ಮೂಡಿಬಂದ ಶಿವ, ರಾಮ, ಆಂಜನೇಯ ಸೇರಿದಂತೆ ಅನೇಕ ದೇವಾನು ದೇವತೆಗಳ ಕಲಾಕೃತಿ ಗಳು ಅದ್ಭುತವಾಗಿವೆ.

      ದಿನೇಶ್ ಮಗರ್ ಅವರ ಕಲಾಕೃತಿಗಳಿಗೆ ದೇಶ - ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಹೀಗೆ ಚಿತ್ರಕಲಾ ಪ್ರಪಂಚದಲ್ಲಿ ದಿನೇಶ್ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಅದ್ಭುತ ಕಲಾವಿದ ದಿನೇಶ್ ಮಗರ್ ಅವರು ಬೆಂಗಳೂರಿನಲ್ಲಿರುವ ಹೆಸರಾಂತ 'ಕರ್ನಾಟಕ ಚಿತ್ರ ಕಲಾ ಪರಿಷತ್' ನ ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.