ಕೋಲಾರ 5K RUN ಮ್ಯಾರಥಾನ್

Sponsored

महावीर कुल्फी सेन्टर - बूंदी

महावीर कुल्फी सेन्टर की और से बूंदी वासियों को दीपावली की हार्दिक बधाई व शुभकामनाएं

ವಿಶ್ವ ಮಧುದೇಹ ದಿನ ಮತ್ತು ಮಾದಕ ವಸ್ತುಗಳ ಬಗ್ಗೆ ಜನಜಾಗೃತಿ ಮೂಡಿಸಲು ಕೋಲಾರದಲ್ಲಿ 5k ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿತ್ತು.

   ‌ಇನ್ನು ಜಿಲ್ಲಾ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಂಸ್ಥೆ ಹಾಗೂ ವಂಶೋದಯ ಆಸ್ಪತ್ರೆ ಆಶ್ರಯದಲ್ಲಿ ನಡೆದ 5k ಮ್ಯಾರಥಾನ್ ಸ್ಪರ್ಧೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ 5k ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ಅಕ್ರಂಪಾಷ ಹಾಗೂ ನಟಿ ಸಂಜನಾ ಆನಂದ್ ಚಾಲನೆ ನೀಡಿದರು. ‌ನಗರದ ವಿವಿಧ ನರ್ಸಿಂಗ್, ಶಾಲಾ ಕಾಲೇಜು ವಿಧ್ಯಾರ್ಥಿಗಳು, ಎನ್,ಸಿ,ಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಪೋಲಿಸರು, ಗೃಹರಕ್ಷಕದಳ , ಪತ್ರಕರ್ತರ ಸೇರಿದಂತೆ ಕ್ರೀಡಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳಿಗೆ  ಡ್ರಗ್ಸ್ ಮುಕ್ತ ಸಮಾಜ ಕುರಿತು ಜಾಗೃತಿ ಹಾಗೂ ಮ್ಯಾರಥಾನ್ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಮಧುಮೇಹ ಮುಕ್ತ ಆರೋಗ್ಯ ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಯಶ್ವಸಿಯಾಯಿತು. ಇನ್ನೂ ಓಟದಲ್ಲಿ ಪಾಲ್ಗೊಂಡ ಎಲ್ಲರಿಗೂ ವಂಶೋದಯ ಹಾಸ್ಪಿಟಲ್ ಅಡ್ವಾನ್ಸ್ಡ್ ಮಲ್ಟಿ ಸ್ಪೆಷಲಿಟಿ ಸೆಂಟರ್ ವತಿಯಿಂದ ಟೀ ಶರ್ಟ್, ಪ್ರಮಾಣ ಪತ್ರ ವಿತರಿಸಲಾಯಿತು. ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಈ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ‌.ಶಾಂತರಾಜು, ಹೆಚ್ಚುವರಿ ಎಸ್ಪಿ ಭಾಸ್ಕರ್, ಡಿವೈಎಸ್ಪಿ ಮಲ್ಲೇಶ್, ಮಹಿಳಾ ಠಾಣೆ ಇನ್ ಸ್ಪೆಕ್ಟರ್ ಶಂಕರಚಾರ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್, ಎಸ್ ಎನ್ ಆರ್ ಆಸ್ಪತ್ರೆಯ ಡಾ.ವಿಜಯಕುಮಾರ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಂಜುನಾಥ್, ವಂಶೋದಯ ಆಸ್ಪತ್ರೆಯ ನಿರ್ದೇಶಕರಾದ ಡಾ.ಅರವಿಂದ್, ಡಾ. ರವಿಕಿರಣ್, ಡಾ.ಉದಯ್ , ವೈದ್ಯ ಡಾ.ವಿನಾಯಕ್ ಪ್ರಭು ಸೇರಿದಂತೆ ಹಲವರು ಹಾಜರಿದ್ದರು.