ನವೆಂಬರ್ 14, 2023

ಕೇಂದ್ರ ಸರ್ಕಾರವು ದೇಶದಾದ್ಯಂತ ನದಿ ಚೋಡಣೆಯನ್ನು ಮಾಡಬೇಕೆಂದು ಒತ್ತಾಯಿಸಿ ತಮಿಳುನಾಡಿನ ತಿರುವಲ್ಲೂರು ಮೂಲದ ಎಸ್. ಸಂಜೀವಿ ಅವರು "ಆಲ್ ಇಂಡಿಯಾ ಸೈಕಲ್ ಜಾಥಾ" ಹಮ್ಮಿಕೊಂಡಿದ್ದಾರೆ.

   ದೇಶದಲ್ಲಿ ನೂರಾರು ನದಿಗಳಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಜೋಡಣೆ ಮಾಡಿದರೆ ದೇಶದಲ್ಲಿರುವ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ ಹಾಗೂ ವಿವಿಧ ರಾಜ್ಯಗಳ ರೈತರ ನಡುವೆ ನೀರಿಗಾಗಿ ನಡೆಯುವ ಸಂಘರ್ಷ ತಪ್ಪುತ್ತದೆ ಎಂದು ಎಸ್. ಸಂಜೀವಿ ಅವರು ಮಾಧ್ಯಮಗಳಿಗೆ ತಿಳಿಸಿದರು.

   ನದಿ ಜೋಡಣೆ ಮಾಡಬೇಕೆಂದು ಒತ್ತಾಯಿಸಿ 2002ರಿಂದ ಇದುವರೆಗೆ ಮೂರು ಸಲ ಸೈಕಲ್ ಜಾಥಾ ಹಮ್ಮಿಕೊಂಡಿದ್ದೇನೆ ಎಂದು ಎಸ್. ಸಂಜೀವ್ ಅವರು ತಿಳಿಸಿದರು. ದೇಶದಾದ್ಯಂತ ನದಿ ಜೋಡಣೆಗಾಗಿ ಜಾಗೃತಿ ಮೂಡಿಸುವ ಸಲುವಾಗಿ 2023ರ ಜೂನ್ ತಿಂಗಳಲ್ಲಿ ಮೂರನೇ ಬಾರಿ ಆಲ್ ಇಂಡಿಯಾ ಸೈಕಲ್ ಜಾಥಾ ಆರಂಭಿಸಿ ಚೆನ್ನೈ, ದೆಹಲಿ, ಆಗ್ರಾ ಸೇರಿದಂತೆ ಅನೇಕ ನಗರಗಳಲ್ಲಿ ಸೈಕಲ್ ಜಾಥಾ ಹಮ್ಮಿಕೊಂಡು ಇದೀಗ ಬೆಂಗಳೂರು ತಲುಪಿದ್ದೇನೆ ಎಂದು ಎಸ್. ಸಂಜೀವಿ ಅವರು ಹೇಳಿದರು. ಮೂರನೇ ಬಾರಿಯ ಜಾಥಾದಲ್ಲಿ ಇದುವರೆಗೆ 8 ಸಾವಿರ ಕಿಲೋಮೀಟರ್ ಕ್ರಮಿಸಿದ್ದೇನೆ ಎಂದು ಎಸ್. ಸಂಜೀವಿ ಅವರು ಹೇಳಿದರು.