ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಎನ್. ನೀಲಿಮಾ, ಬಾಲಾಜಿ ಹಾಗೂ ಸೆಲ್ವಮಣಿ ಎಂಬುವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಎನ್ವಿಗ್ರೀನ್ ಕಂಪನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಥ್ ಹೆಗಡೆ ಅವರು ತಮಗೆ ವಂಚನೆ ಎಸಗಿದ್ದಾರೆ ಇಂದು ಆರೋಪಿಸಿದರು.

    ಪ್ಲಾಸ್ಟಿಕ್ ಫ್ರೀ ವರ್ಲ್ಡ್ ಸೃಷ್ಟಿಸುವುದಾಗಿ ಎನ್ವಿಗ್ರೀನ್ ಎಂಬ ಕಂಪನಿಯನ್ನು ಹುಟ್ಟು ಹಾಕಿದ್ದ ಅಶ್ವಥ್ ಹೆಗಡೆ ಅವರು ಹೂಡಿಕೆ ನೆಪದಲ್ಲಿ ವಂಚನೆ ಎಸೆಗಿದ್ದಾರೆ ವಂಚನೆಗೆ ಒಳಗಾದ  ಬೆಂಗಳೂರಿನ ಎನ್.   ನೀಲಿಮಾ ಆರೋಪಿಸಿದರು. ಅಶ್ವಥ್ ಹೆಗಡೆಯವರು ನನಗೆ 1 ಕೋಟಿ 30 ಲಕ್ಷ ರೂಪಾಯಿಗಳನ್ನು ಕೊಡಬೇಕಿದ್ದು ಇದುವರೆಗೆ ನನಗೆ ಹಣವನ್ನು ಹಿಂತಿರುಗಿಸಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಅಶ್ವಥ್  ಹೆಗಡೆಯವರ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ನೀಲಿಮಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.  ವಿವಿಧ ಕ್ಷೇತ್ರಗಳ  ಸೆಲೆಬ್ರಿಟಿಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಅಮಾಯಕ ಜನರಿಗೆ ಅಶ್ವಥ್ ಹೆಗಡೆಯವರು ಬಾರಿ ಮೋಸ ಮಾಡುತ್ತಿದ್ದಾರೆ ಎಂದು ನೀಲಿಮಾ ಅವರು ಗಂಭೀರ ಆರೋಪ ಮಾಡಿದರು. ಎನ್ವಿಗ್ರೀನ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ನೂರಾರು ಅಮಾಯಕ ಜನರಿಗೆ ಹಾಗೂ ಮಹಿಳಾ ಉದ್ಯಮಿಗಳನ್ನು ನಂಬಿಸಿ ಹಣ ಪಡೆದು ಕೋಟ್ಯಾಂತರ ರೂಪಾಯಿ ಜನ ಎಸಗಿದ್ದಾನೆ ಎಂದು ನೀಲಿಮಾ ಅವರು ಅಶ್ವಥ್ ಹೆಗಡೆಯವರ ವಿರುದ್ಧ ಗಂಭೀರ ಆರೋಪ ಮಾಡಿದರು. ಅಶ್ವಥ್  ಹೆಗಡೆಯವರ ವಿರುದ್ಧ ಬೇರೆ ರಾಜ್ಯಗಳಲ್ಲಿ ಈಗಾಗಲೇ ವಂಚನೆ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಬಂಧ ಬಂಧಿತನಾಗಿದ್ದ. ಅನಂತರ ಜಾಮೀನು ಪಡೆದು ಮತ್ತೆ ಹಣ ಹೂಡಿಕೆ ನೆಪದಲ್ಲಿ ವಂಚನೆ ಮಾಡುತ್ತಿದ್ದಾನೆ ಎಂದು ನೀಲಿಮಾ ಅವರು ಆರೋಪಿಸಿದರು. ಅಶ್ವಥ್ ಹೆಗಡೆಯನ್ನು ಆದಷ್ಟು ಬೇಗ ಬೆಂಗಳೂರು ಪೊಲೀಸರು ಬಂಧಿಸಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೀಲಿಮಾ ಅವರು ಒತ್ತಾಯಿಸಿದರು.