ಬೆಂಗಳೂರು : ಬೆಂಗಳೂರು ಸೊಸೈಟಿ ಆಫ್ ಅಬ್‌ಸ್ಟೆಟ್ರಿಕ್ಸ್ & ಗೈನಕಾಲಜಿ ಮತ್ತು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಿಬಿಎಂಪಿ ಮೆರ್ಟನಿಟಿ ಹೋಮ್ ನಲ್ಲಿ ಆಯೋಜಿಸಲಾಗಿದ್ದ ಉಚಿತ ಬೃಹತ್ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ರವರು ಉದ್ಘಾಟಿಸಿದರು.
ಈ ಶಿಬಿರದಲ್ಲಿ ಸಕ್ಕರೆ ಖಾಯಿಲೆ, ಬಿ.ಪಿ, ಬೊಜ್ಜು ಮತ್ತು ವಿವಿಧ ಖಾಯಿಲೆಗಳ ತಪಾಸಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಐ.ಎ.ಎಸ್. ಅಧಿಕಾರಿ ತ್ರಿಲೋಕಚಂದ್ರ, ಖ್ಯಾತ ವೈದ್ಯೆ ಪದ್ಮನಿ ಪ್ರಸಾದ್, ಬಿಬಿಎಂಪಿ ಆರೋಗ್ಯಧಿಕಾರಿ ಮಂಜುಳ ಬುಗ್ಗಿ ಹಾಗೂ ಇನ್ನಿತರ ತಜ್ಞ ವೈದ್ಯರುಗಳು ಉಪಸ್ಥಿತರಿದ್ದರು.