ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಸಂಸತ್ ನಲ್ಲಿ ಮಾತನಾಡಿದರು. ಈ ವೇಳೆ ಅಮೆರಿಕದ ನೂರಾರು ಸಂಸತ್ ಸದಸ್ಯರು ಭಾಗಿಯಾಗಿದ್ದರು. ಭಾರತ - ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ, ಜಾಗತಿಕ ವಿದ್ಯಮಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರರ್ಗಳವಾಗಿ ಮಾತನಾಡಿ ಸಂಸತ್ ಸದಸ್ಯರ ಪ್ರಶಂಸೆಗೆ ಪಾತ್ರರಾದರು.