ಬೆಂಗಳೂರಿನ "ಸೂರ್ಯ ಕಿರಣ ಪ್ರತಿಷ್ಠಾನ"ವು ಜುಲೈ 2 ರಂದು "ಹೆಲ್ತಿ ಬೇಬಿ ಕಾಂಪಿಟೇಷನ್- 2023" ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮವು ವಿವಿ ಪುರಂ ನ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಲಿದೆ ಎಂದು 'ಸೂರ್ಯ ಕಿರಣ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಯಾದ ಆರ್. ರಮೇಶ್ ಅವರು ತಿಳಿಸಿದರು.
ಈ ವಿಶಿಷ್ಟವಾದ ಸ್ಪರ್ಧೆಯಲ್ಲಿ 3 ರಿಂದ 5 ವರ್ಷದ ಮಕ್ಕಳು ತಮ್ಮ ತಂದೆ-ತಾಯಿಯ ಜತೆಗೆ ಭಾಗವಹಿಸಬಹುದಾಗಿದೆ.